alex Certify
ಕನ್ನಡ ದುನಿಯಾ       Mobile App
       

Kannada Duniya

ಪದಕ ಹರಾಜಿಗಿಟ್ಟ ಫುಟ್ ಬಾಲ್ ದಂತಕತೆ ಪೀಲೆ

peele foot

ರಿಯೋ ಡಿ ಜನೈರೋ: ವಿಶ್ವ ಫುಟ್ ಬಾಲ್ ಜಗತ್ತಿನ ಲೆಜೆಂಡ್ ಎಂದೇ ಖ್ಯಾತರಾಗಿರುವ ಪೀಲೆ ತಮ್ಮ ಪ್ರಶಸ್ತಿ, ಪುರಸ್ಕಾರ, ಪದಕಗಳನ್ನು ಹರಾಜಿಗೆ ಇಡಲು ತೀರ್ಮಾನಿಸಿದ್ದಾರೆ. ಶ್ರೇಷ್ಠ ಆಟಗಾರರಾಗಿರುವ ಪೀಲೆ ಅವರಿಗೆ ಅಸಂಖ್ಯಾತ ಮೆಡಲ್, ಬಹುಮಾನಗಳು ಬಂದಿವೆ.

ಬ್ರೆಜಿಲ್ ನ ಕ್ಯುರಿಟಿಬಾ ಸಿಟಿಯಲ್ಲಿರುವ ಪೆಕ್ವಿನೋ ಪ್ರಿನ್ಸಿಪೆ ಮಕ್ಕಳ ಆಸ್ಪತ್ರೆಗೆ ದೇಣಿಗೆ ನೀಡುವ ಸಲುವಾಗಿ ಪೀಲೆ ತಮ್ಮಲ್ಲಿರುವ ಪದಕ, ಟ್ರೋಫಿ ಹಾಗೂ ವೃತ್ತಿ ಜೀವನದ 1000ನೇ ಗೋಲು ಬಾರಿಸಿದ ಸಂದರ್ಭದಲ್ಲಿ ದೊರೆತ ಪುರಸ್ಕಾರಗಳನ್ನೆಲ್ಲಾ ಹರಾಜಿಗೆ ಇಡಲಿದ್ದಾರೆ. ಪೀಲೆ ಅವರು ಸುಮಾರು 2 ಸಾವಿರಕ್ಕೂ ಅಧಿಕ ಮೆಡಲ್, ಟ್ರೋಫಿಗಳನ್ನು ಹರಾಜಿಗೆ ಇಡಲಿದ್ದು, ಇವುಗಳಲ್ಲಿ ಬ್ರೆಜಿಲ್ ಪರವಾಗಿ ಆಟವಾಡಿ ಗೆದ್ದಿರುವ 3 ವಿಶ್ವಕಪ್ ಪದಕಗಳು ಕೂಡ ಸೇರಿವೆ ಎನ್ನಲಾಗಿದೆ.

ಲಾಸ್ ಏಂಜಲೀಸ್ ಮೂಲದ ಜುಲಿಯನ್ ಆಕ್ಷನ್ಸ್ ಎಂಬ ಕಂಪನಿ ಹರಾಜಿನ ಪ್ರಕ್ರಿಯೆ ನಡೆಸಲಿದೆ. ಮುಂದಿನ ಜೂನ್ 7 ರಿಂದ 9 ರವರೆಗೆ ಲಂಡನ್ ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದ್ದು, ಪೀಲೆ ತಮ್ಮ ಅಮೂಲ್ಯ ವಸ್ತುಗಳನ್ನು ಹರಾಜು ಮಾಡಿ ಸಾಮಾಜಿಕ ಕಾರ್ಯಕ್ಕೆ ಬಳಸುತ್ತಿರುವುದಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...