alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಯರ್ಸ್ ಹೇಳಿದ್ದಕ್ಕೆ ಮೂಳೆಯೇ ಮುರಿದು ಹೋಯ್ತು…!

ರಷ್ಯಾದಲ್ಲಿ ನಡೀತಿರೋ ಫಿಫಾ ವಿಶ್ವ ಕಪ್ ಫುಟ್ಬಾಲ್ ಅದೆಷ್ಟೋ ಹೊಸ ಹೊಸ ದಾಖಲೆಗಳಿಗೆ, ಎಕ್ಸೈಟಿಂಗ್ ಮ್ಯಾಚ್ ಗಳಿಗೆ ಸಾಕ್ಷಿಯಾಗ್ತಿದೆ.

ಆದರ ಜೊತೆಗೆ ಫುಟ್ಬಾಲ್ ಪ್ರೇಮಿಗಳು ಮೈ ಕೈ ಮೂಳೆ ಮುರಿದುಕೊಳ್ತಿದ್ದಾರೆ. ಅದು ಮ್ಯಾಚ್ ನ ಥ್ರಿಲ್ಲಿಂಗ್ ಕ್ಷಣಗಳನ್ನ ಎಂಜಾಯ್ ಮಾಡಿದ್ದಕ್ಕೆ.

ಹೌದು. ಚೀನಾದಲ್ಲಿ ಈಗಾಗ್ಲೇ ಇಂತಾ ಸುಮಾರು ಘಟನೆಗಳು ನಡೆದಿವೆ. ಕೆಲ ದಿನಗಳ ಹಿಂದಷ್ಟೇ ಉರುಗ್ವೆ ಮತ್ತು ಸೌದಿ ಅರೇಬಿಯಾದ ಪಂದ್ಯವಿತ್ತು. ಆ ಪಂದ್ಯ ನಡೆದ ಮರುದಿನ ಯುವಕನೊಬ್ಬ ಮುರಿದು ಹೋಗಿದ್ದ ತನ್ನ ಬಲಗೈ ಸರಿಪಡಿಸಿಕೊಳ್ಳೋಕೆ ವೈದ್ಯರ ಬಳಿ ಹೋದ. ಈ ಪೆಟ್ಟು ಹೇಗಾಯ್ತು ಅಂತ ಡಾಕ್ಟರ್ ಕೇಳಿದ್ರೆ ಆತ ಫುಟ್ಬಾಲ್ ಮ್ಯಾಚ್ ನೋಡ್ತಾ ಇದ್ದೆ. ಗೆದ್ದ ತಂಡಕ್ಕೆ ಚಿಯರ್ಸ್ ಹೇಳುವಾಗ ಕೈ ಮುರಿದುಹೋಯ್ತು ಅಂತ ಹೇಳಿದ.

ಇಂತಾ ಹಲವು ಘಟನೆಗಳು ಮೇಲಿಂದ ಮೇಲೆ ನಡೀತಿವೆ. ಬ್ರೆಜಿಲ್ ಫುಟ್ಬಾಲ್ ಆಟಗಾರನ ಸೋದರಿಯೊಬ್ಬರು ಕೂಡ ಪಂದ್ಯವನ್ನ ವೀಕ್ಷಣೆ ಮಾಡುವ ವೇಳೆ ಭುಜದ ಮೂಳೆ ಜರುಗಿದೆ ಅಂತ ವೈದ್ಯರ ಬಳಿ ಹೋಗಿದ್ದರು. ಆಟವನ್ನ ಎಂಜಾಯ್ ಮಾಡುವ ಭರದಲ್ಲಿ ಹೀಗೆ ಮೂಳೆ ಮುರಿದುಕೊಳ್ಳುವ ಪ್ರಸಂಗ ತುಂಬಾನೇ ವಿಚಿತ್ರ ಅಲ್ವಾ…?

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...