alex Certify
ಕನ್ನಡ ದುನಿಯಾ       Mobile App
       

Kannada Duniya

ಐ.ಪಿ.ಎಲ್. ಪ್ರಸಾರಕ್ಕೆ ಬಿ.ಸಿ.ಸಿ.ಐ. ಟೆಂಡರ್

Anurag Thakur

ನವದೆಹಲಿ: ಲೋಧಾ ಸಮಿತಿ, ಆಡಳಿತದಲ್ಲಿ ಪಾರದರ್ಶಕತೆ ತರಲು ನೀಡಿರುವ ಸಲಹೆಯನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಬಿ.ಸಿ.ಸಿ.ಐ. ಮತ್ತೊಂದು ಹೆಜ್ಜೆ ಇಟ್ಟಿದೆ.

ಲೋಧಾ ಸಮಿತಿಯ ನಿರ್ದೇಶನದಂತೆ ಐ.ಪಿ.ಎಲ್. ಪಂದ್ಯಗಳ ಪ್ರಸಾರದ ಹಕ್ಕು ನೀಡಲು ಮುಕ್ತ ಟೆಂಡರ್ ಕರೆಯಲಾಗಿದೆ ಎಂದು ಬಿ.ಸಿ.ಸಿ.ಐ. ಅಧ್ಯಕ್ಷ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಐ.ಪಿ.ಎಲ್. ಪಂದ್ಯಗಳ ಟಿ.ವಿ. ಮತ್ತು ಡಿಜಿಟಲ್ ಮಾಧ್ಯಮಗಳಿಗೆ ಪ್ರಸಾರದ ಹಕ್ಕು ನೀಡಲು ಲೋಧಾ ಸಮಿತಿ ನಿರ್ದೇಶನ ನೀಡಿದೆ. ಸಂಸ್ಥೆಯ ವ್ಯಾವಹಾರಿಕ ಚಟುವಟಿಕೆಗಳಲ್ಲಿ ಪಾರದರ್ಶಕವಾಗಿರಬೇಕೆಂದು ಹೇಳಿದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಐ.ಪಿ.ಎಲ್. ಪ್ರಮುಖ ಲೀಗ್ ಆಗಿದ್ದು, ಸದ್ಯ ಸೋನಿ ಪಿಕ್ಚರ್ಸ್ ನೆಟ್ ವರ್ಕ್ ಇಂಡಿಯಾ ಐ.ಪಿ.ಎಲ್. ಪಂದ್ಯಗಳ ಪ್ರಸಾರದ ಹಕ್ಕನ್ನು ಹೊಂದಿದ್ದು, 2017 ರ ಟೂರ್ನಿಯ ಅಂತ್ಯದವರೆಗೆ ಒಪ್ಪಂದ ಮಾಡಿಕೊಂಡಿದೆ. ಇದೀಗ ಮುಂದಿನ 10 ವರ್ಷಗಳ ಅವಧಿಗೆ ಪ್ರಸಾರದ ಹಕ್ಕು ನೀಡಲು ಟೆಂಡರ್ ಕರೆಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...