alex Certify
ಕನ್ನಡ ದುನಿಯಾ       Mobile App
       

Kannada Duniya

1000 ಕೋಟಿ ರೂ. ಕ್ಯಾಶ್ ಪ್ರೈಜ್ ಗೆದ್ದ ಮೇವೆದರ್

ಲಾಸ್ ವೆಗಾಸ್: ಬಾಕ್ಸಿಂಗ್ ನಲ್ಲಿ ನನಗ್ಯಾರೂ ಸಾಟಿ ಇಲ್ಲ ಎಂಬುದನ್ನು ಅಮೆರಿಕದ ಫ್ಲಾಯ್ಡ್ ಮೇವೆದರ್ ಮತ್ತೊಮ್ಮೆ ಸಾರಿ ಹೇಳಿದ್ದಾರೆ.

ಹಿಂದೆಯೇ ನಿವೃತ್ತಿ ಹೇಳಿದ್ದ ಅವರು ವೃತ್ತಿ ಜೀವನದ 50 ನೇ ಪಂದ್ಯವನ್ನಾಡಿ ದಾಖಲೆ ಬರೆದು ನಿವೃತ್ತರಾಗಲು ಮತ್ತೊಮ್ಮೆ ಕಣಕ್ಕೆ ಇಳಿದಿದ್ದರು.

ಶತಮಾನದ ಪಂದ್ಯವೆಂದೇ ಹೇಳಲಾಗಿದ್ದ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ವೃತ್ತಿ ಜೀವನದಲ್ಲಿ ಸತತ 50 ಪಂದ್ಯಗಳನ್ನು ಜಯಿಸಿ ನಿವೃತ್ತರಾಗಿದ್ದಾರೆ.

ಐರಿಷ್ ಬಾಕ್ಸರ್ ಕಾನರ್ ಮೆಕ್ ಗ್ರೆಗರ್ ಮಣಿಸಿದ ಮೇವೆದರ್ ಬರೋಬ್ಬರಿ 1000 ಕೋಟಿ ರೂ. ನಗದು ಬಹುಮಾನ ಪಡೆದುಕೊಂಡಿದ್ದಾರೆ.

10 ರೌಂಡ್ ಗಳಲ್ಲಿ ಗೇಮ್ ಫಿನಿಶ್ ಮಾಡಿದ್ದು, ಚೊಚ್ಚಲ ಪಂದ್ಯದಲ್ಲಿ ಮೆಕ್ ಗ್ರೆಗರ್ ಟಫ್ ಫೈಟ್ ನೀಡಿದ್ದಾರೆ. 5 -6 ತಿಂಗಳಿಂದ ವಿಶ್ವವೇ ಎದುರು ನೋಡುತ್ತಿದ್ದ ಪಂದ್ಯ ಇದಾಗಿತ್ತು.

ಮೊದಲ 3 ಸುತ್ತಿನಲ್ಲಿ ಮುನ್ನಡೆದಿದ್ದ ಗ್ರೆಗರ್ 4 ನೇ ಸುತ್ತಿನಿಂದ ಮೇವೆದರ್ ಪಂಚ್ ಗೆ ಮಂಕಾದರು. 10 ನೇ ಸುತ್ತಿಗೆ ಫೈಟ್ ಆಫ್ ದಿ ಮಿಲೆನಿಯಂ ಫೈಟ್ ಅಂತ್ಯ ಕಂಡಿತು.

2497 ಕೋಟಿ ರೂ. ಮೊತ್ತದ ಪಂದ್ಯ ಇದಾಗಿತ್ತು. ಮೇವದರ್ 1000 ಕೋಟಿ ರೂ. ನಗದು ಹಾಗೂ ಮೊಸಳೆ ಚರ್ಮದ ಬೆಲ್ಟ್ ಪಡೆದರೆ, ಮೆಕ್ ಗ್ರೆಗರ್ 480 ಕೋಟಿ ರೂ. ತಮ್ಮದಾಗಿಸಿಕೊಂಡಿದ್ದಾರೆ.

ಹಣದ ಹೊಳೆಯೇ ಹರಿದ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ವೃತ್ತಿಪರ ಬಾಕ್ಸಿಂಗ್ ನಲ್ಲಿ 50 ನೇ ಗೆಲುವಿನೊಂದಿಗೆ ಬಾಕ್ಸಿಂಗ್ ಲೋಕದ ಸಾಮ್ರಾಟ ತಾನೇ ಎಂಬುದನ್ನು ಮೇವೆದರ್ ನಿರೂಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...