alex Certify
ಕನ್ನಡ ದುನಿಯಾ       Mobile App
       

Kannada Duniya

ರಿಲೀಸ್ ಆಯ್ತು ಕ್ರಿಕೆಟ್ ದೇವರ ಸಿನೆಮಾ ಪೋಸ್ಟರ್

sachin 123

ಕ್ರಿಕೆಟ್ ದೇವರೆಂದೇ ಖ್ಯಾತರಾದ ಸಚಿನ್ ತೆಂಡೂಲ್ಕರ್ ಆತ್ಮಕತೆ ಆಧರಿಸಿರುವ ಹೊಸ ಚಿತ್ರ ‘ಸಚಿನ್’ ಸಿನೆಮಾದ ಮೊದಲ ಪೋಸ್ಟರ್ ರಿಲೀಸ್ ಆಗಿದೆ. ಈಗಾಗಲೇ ಹಲವಾರು ಕ್ರೀಡಾಪಟುಗಳ ಜೀವನ ಚರಿತ್ರೆ ಆಧರಿಸಿದ ಸಿನೆಮಾ ತೆರೆಗೆ ಬಂದಿವೆ.

ಕ್ರೀಡಾಪಟುಗಳು, ಕ್ರೀಡೆಯ ಕುರಿತಾದ ಹಲವು ಸಿನೆಮಾ ನಿರ್ಮಾಣವಾಗಿವೆ. ಧೋನಿ, ಅಜರ್, ಮೇರಿಕೋಮ್ ಸೇರಿದಂತೆ ಹಲವರ ಜೀವನ ಚರಿತ್ರೆ ಸಿನೆಮಾ ಆಗಿವೆ. ಈಗ ಸಚಿನ್ ತೆಂಡೂಲ್ಕರ್ ಕುರಿತಾ‍ದ ಸಿನೆಮಾ ತೆರೆಗೆ ಬರುತ್ತಿದೆ. ‘ಸಚಿನ್’ ಹೆಸರಿನಲ್ಲೇ ಚಿತ್ರ ಮೂಡಿಬರುತ್ತಿದೆ. ತಮ್ಮ ಚಿತ್ರದ ಮೊದಲ ಪೋಸ್ಟರ್ ಅನ್ನು ಸಚಿನ್ ಟ್ವೀಟ್ ಮಾಡಿದ್ದಾರೆ. ಇದನ್ನು ಸುರೇಶ್ ರೈನಾ, ರೋಹಿತ್ ಶರ್ಮ, ವೀರೇಂದ್ರ ಸೆಹ್ವಾಗ್ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

55 ಡೇಸ್ ಆಫ್ ಟ್ರೈನಿಂಗ್, 1 ಪೇರ್ ಫಾರ್ ಟ್ರೋಸರ್ಸ್, ದಿ ಸಚಿನ್ ಸ್ಟೋರಿ ಎಂದು ಪೋಸ್ಟರ್ ನಲ್ಲಿದೆ. ಅಲ್ಲದೇ ಟೈಟಲ್ ಕೆಳಗೆ ಎ ಬಿಲಿಯನ್ ಡ್ರೀಮ್ಸ್ ಎಂಬ ಟ್ಯಾಗ್ ಲೈನ್ ಕೂಡ ಇದೆ. ಏಪ್ರಿಲ್ 14ರಂದು ಟ್ರೇಲರ್ ರಿಲೀಸ್ ಆಗಲಿದ್ದು, ಶಾರೂಖ್ ಖಾನ್, ‘ಸಚಿನ್’ ಚಿತ್ರ ನೋಡಲು ಕಾತರದಿಂದ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಸಚಿನ್ ಕೂಡಾ ನಟಿಸಿರುವ ಈ ಚಿತ್ರವನ್ನು 5 ದೇಶಗಳಲ್ಲಿ 30 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...