alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಫ್ಯಾಮಿಲಿ ಫೋಟೋದಲ್ಲಿಲ್ಲ ಅನುಷ್ಕಾ….!

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಬಹು ಕಾಲದ ಗೆಳತಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ದುಗದ್ದಲವಿಲ್ಲದೆ ಇಟಲಿಯಲ್ಲಿ ವಿವಾಹ ಬಂಧನಕ್ಕೊಳಗಾದ ಜೋಡಿ ವಿದೇಶದಲ್ಲೇ ಹನಿಮೂನ್ ಮುಗಿಸಿಕೊಂಡು ಭಾರತಕ್ಕೆ ಬಂದಿಳಿದಿದೆ.

ದೆಹಲಿ ನಿವಾಸಿಯಾಗಿರುವ ವಿರಾಟ್ ಕೊಹ್ಲಿ, ಇಂದು ದೆಹಲಿಯ ಪಂಚತಾರಾ ಹೋಟೆಲ್ ನಲ್ಲಿ ಅದ್ದೂರಿ ಅರತಕ್ಷತೆಯನ್ನೇರ್ಪಡಿಸಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನೂ ತಮ್ಮ  ಪತ್ನಿ ಅನುಷ್ಕಾರೊಂದಿಗೆ ತೆರಳಿ ಆಹ್ವಾನಿಸಿದ್ದರು.

ಅನುಷ್ಕಾ ಶರ್ಮಾರ ಬಾಲಿವುಡ್ ಸ್ನೇಹಿತರಿಗಾಗಿ ಮುಂಬೈನಲ್ಲಿ ಡಿಸೆಂಬರ್ 26 ರಂದು ಮತ್ತೊಂದು ಔತಣಕೂಟ ಏರ್ಪಡಿಸಲಾಗಿದ್ದು, ಇದರಲ್ಲಿ ಖ್ಯಾತನಾಮರು ಪಾಲ್ಗೊಳ್ಳಲಿದ್ದಾರೆ. ಈ ಮಧ್ಯೆ ಇಂದಿನ ಸಮಾರಂಭದ ಮೊದಲ ಚಿತ್ರ ಹೊರ ಬಿದ್ದಿದ್ದು, ವಿರಾಟ್ ಕೊಹ್ಲಿ ತಮ್ಮ ಹತ್ತಿರದ ಸಂಬಂಧಿಕರ ಜೊತೆ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ಆದರೆ ಅದರಲ್ಲಿ ವಿರಾಟ್ ಪತ್ನಿ ಅನುಷ್ಕಾ ಮಿಸ್ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...