alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಫಾ ವಿಶ್ವಕಪ್ ನಲ್ಲಿ ಇತಿಹಾಸ ಬರೆದ ಕ್ರೊಯೇಷಿಯಾ

ಫಿಫಾ ವಿಶ್ವಕಪ್ ಕೊನೆ ಹಂತಕ್ಕೆ ಬಂದು ನಿಂತಿದೆ. ಇದೇ 15 ರಂದು ಫೈನಲ್ ಹಣಾಹಣಿ ನಡೆಯಲಿದೆ. ಬುಧವಾರ ತಡರಾತ್ರಿ ನಡೆದ 2 ನೇ ಸೆಮಿಫೈನಲ್ ಪಂದ್ಯದಲ್ಲಿ ಕ್ರೊಯೇಷಿಯಾ ಇತಿಹಾಸ ಬರೆದಿದೆ. ಇಂಗ್ಲೆಂಡ್ ವಿರುದ್ಧ ಅಬ್ಬರಿಸಿದ ಕ್ರೊಯೇಷಿಯಾ ಫೈನಲ್ ಗೆ ಪ್ರವೇಶ ಮಾಡಿದೆ. ಜುಲೈ 15 ರಂದು ಕ್ರೊಯೇಷಿಯಾ ಫಾನ್ಸ್ ವಿರುದ್ಧ ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಾಡಲಿದೆ.

ಇಂಗ್ಲೆಂಡ್ ವಿರುದ್ಧ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ನಿರ್ಧಾರಿತ ಸಮಯದಲ್ಲಿ ಉಭಯ ತಂಡಗಳು 1-1 ಅಂಕ ಗಳಿಸಿ ಸಮಬಲ ಸಾಧಿಸಿದ್ದವು. ಇದಾದ ನಂತ್ರ 109 ನೇ ನಿಮಿಷದಲ್ಲಿ 32 ವರ್ಷದ ಮಾಂಡ್ಜುಕಿಕ್ ದಾಖಲಿಸಿದ ಗೋಲು ಕ್ರೊಯೇಷಿಯಾ ಫೈನಲ್ ಕನಸನ್ನು ನನಸು ಮಾಡಿತು.

ಇದೇ ಮೊದಲ ಬಾರಿ ಫಿಫಾ ವಿಶ್ವಕಪ್ ನಲ್ಲಿ ಕ್ರೊಯೇಷಿಯಾ ಫೈನಲ್ ತಲುಪಿ ಇತಿಹಾಸ ಬರೆದಿದೆ. ಆದ್ರೆ ಎರಡನೇ ಬಾರಿ ಫೈನಲ್ ತಲುಪುವ ಇಂಗ್ಲೆಂಡ್ ಕನಸು ಮಾಂಡ್ಜುಕಿಕ್ ರಿಂದ ನುಚ್ಚುನೂರಾಯ್ತು. ಇಂಗ್ಲೆಂಡ್ ಈ ಹಿಂದೆ 1990 ರಲ್ಲಿ ಒಮ್ಮೆ ಫೈನಲ್ ಪ್ರವೇಶ ಮಾಡಿತ್ತಲ್ಲದೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.

ಈ ಹಿಂದೆ ಒಮ್ಮೆ ಮಾತ್ರ ಕ್ರೊಯೇಷಿಯಾ ಸೆಮಿಫೈನಲ್ ತಲುಪಿತ್ತು. 1998 ರಲ್ಲಿ ಫ್ರಾನ್ಸ್ ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕ್ರೊಯೇಷಿಯಾ ಫ್ರಾನ್ಸ್ ವಿರುದ್ಧವೇ ಸೋಲುಂಡು ಮನೆಗೆ ಬಂದಿತ್ತು. ಆದ್ರೆ ಈ ಬಾರಿ ಫೈನಲ್ ಪ್ರವೇಶ ಮಾಡಿದೆ. ಜುಲೈ 14 ರಂದು ಮೂರನೇ ಸ್ಥಾನಕ್ಕಾಗಿ ಇಂಗ್ಲೆಂಡ್ ಬೆಲ್ಜಿಯಂ ವಿರುದ್ಧ ಸೆಣೆಸಾಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...