alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಗ್ಲೆಂಡ್​ ಫೈನಲ್ ಪ್ರವೇಶಿಸಿದಲ್ಲಿ ಆರ್ಥಿಕತೆಯಲ್ಲಿ ಏರಿಕೆ

ಫಿಫಾ ವಿಶ್ವಕಪ್​ ಟೂರ್ನಿಯಲ್ಲಿ ಅಮೋಘ ಪ್ರದರ್ಶನವನ್ನು ನೀಡ್ತಾ ಇರೋ ಇಂಗ್ಲೆಂಡ್​ ತಂಡ, ಫೈನಲ್​ಗೆ ಪ್ರವೇಶ ಪಡೆದಲ್ಲಿ, ಇಂಗ್ಲೆಂಡ್​ ಆರ್ಥಿಕತೆಯಲ್ಲಿ ಸುಮಾರು 2.72 ಬಿಲಿಯನ್​ ಪೌಂಡ್ಸ್​​ ಏರಿಕೆ ಆಗಲಿದೆ.

ಸಂಶೋಧನೆಯ ಅನುಸಾರ ಈ ಮಾಹಿತಿ ಬಹಿರಂಗವಾಗಿದೆ. ಇಂಗ್ಲೆಂಡ್​ ತಂಡದ ಅಭಿಮಾನಿಗಳು ಪಂದ್ಯದ ರಸಮಯ ಕ್ಷಣವನ್ನು ಸವಿಯಲು ಪಬ್​, ಬಾರ್,​​​ ರೆಸ್ಟೋರೆಂಟ್​​ಗಳಲ್ಲಿ ಬೀಡು ಬಿಟ್ಟಿರುತ್ತಾರೆ. ಇದ್ರಿಂದಲೇ ಸುಮಾರು 193 ಮಿಲಿಯನ್​ ಪೌಂಡ್​​ ಹಣ ಖರ್ಚು ಮಾಡುವ ಅಂದಾಜನ್ನು ಹಾಕಿಕೊಳ್ಳಲಾಗಿತ್ತು. ಆದ್ರೆ, ಇಂಗ್ಲೆಂಡ್​ ಈ ಬಾರಿಯ ಫಿಫಾ ವಿಶ್ವಕಪ್​ ಟೂರ್ನಿಯ ಫೈನಲ್​​ಗೆ ಪ್ರವೇಶ ಪಡೆದಲ್ಲಿ ಈ ಲೆಕ್ಕಾಚಾರ ದುಪ್ಪಟ್ಟು ಆಗುವ ಸಾಧ್ಯತೆ ಇದೆ.

ಏಪ್ರಿಲ್​ ತಿಂಗಳಲ್ಲಿ ಈ ಸಂಶೋಧನೆ ನಡೆಸಲಾಗಿತ್ತು. ಇದರ ಅನುಸಾರ ಬಹಳಷ್ಟು ಜನರು ಮನೆಯಲ್ಲಿ ಟಿವಿಯ ಪರದೆಯ ಮೇಲೆ ಪಂದ್ಯ ನೋಡಲು ಖುಷಿ ಪಡ್ತಾರೆ. ಇಂಗ್ಲೆಂಡ್​ ಸದ್ಯ ರಷ್ಯಾದಲ್ಲಿ ನಡೆಯುತ್ತಿರುವ ಫುಟ್ಬಾಲ್​ ವಿಶ್ವಕಪ್​ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡ್ತಾ ಇದ್ದು, ಬುಧವಾರ ಸೆಮಿಫೈನಲ್​ ಫೈಟ್ ​​ನಲ್ಲಿ ಅಖಾಡ ಪ್ರವೇಶಿಸಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...