alex Certify
ಕನ್ನಡ ದುನಿಯಾ       Mobile App
       

Kannada Duniya

ಲೈವ್ ನೀಡ್ತಿದ್ದ ವರದಿಗಾರ್ತಿಗೆ ಮುತ್ತಿಟ್ಟ ಅಭಿಮಾನಿ

ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ನಲ್ಲಿ ನಾಚಿಕೆಗೇಡಿನ ಕೆಲಸ ನಡೆದಿದೆ. ಅದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಂದ್ಯಾವಳಿಯ ನೇರ ವರದಿ ನೀಡ್ತಿದ್ದ ವರದಿಗಾರ್ತಿ ಮೇಲೆ ದಬ್ಬಾಳಿಕೆ ನಡೆದಿದೆ.

ಜರ್ಮನ್ ಟಿವಿ ಚಾನೆಲ್ ಗಾಗಿ ವಿಶ್ವಕಪ್ ಪಂದ್ಯದ ನೇರ ವರದಿಯನ್ನು ಜೂಲಿಯತ್ ಥೆರಾನಾ ನೀಡ್ತಿದ್ದಳು. ಈ ವೇಳೆ ವ್ಯಕ್ತಿಯೊಬ್ಬ ಓಡಿ ಬಂದು ವರದಿಗಾರ್ತಿಗೆ ಮುತ್ತಿಟ್ಟಿದ್ದಾನೆ. ಕೆಟ್ಟ ದೃಷ್ಟಿಯಿಂದ ಸ್ಪರ್ಶಿಸಿದ್ದಾನೆ. ನೇರ ವರದಿ ನೀಡ್ತಿದ್ದ ವರದಿಗಾರ್ತಿ ಆಘಾತಕ್ಕೊಳಗಾಗಿದ್ದಾಳೆ. ಸಂಭಾಳಿಸಿಕೊಂಡು ವರದಿ ಮುಂದುವರೆಸಿದ್ದಾಳೆ. ನಂತ್ರ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹಾಕಿದ್ದಾಳೆ.

ಇಂಥ ಕೆಟ್ಟ ವರ್ತನೆ ನಾನು ನಿರೀಕ್ಷಿಸಿರಲಿಲ್ಲ. ನಾನು ನನ್ನ ಕೆಲಸವನ್ನು ಗೌರವಿಸುತ್ತೇನೆ ಎಂದು ವರದಿಗಾರ್ತಿ ಇನ್ಸ್ಟ್ರಾಗ್ರಾಮ್ ನಲ್ಲಿ ಹೇಳಿದ್ದಾಳೆ. ಸುಮಾರು ಎರಡು ಗಂಟೆಗಳ ಕಾಲ ಮೈದಾನದಲ್ಲಿದ್ದೆ. ಆಗ ಯಾವುದೇ ಘಟನೆ ನಡೆಯಲಿಲ್ಲ. ನೇರ ಪ್ರಸಾರ ಶುರುವಾಗ್ತಿದ್ದಂತೆ ವ್ಯಕ್ತಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ನಂತ್ರ ಆತ ಮೈದಾನಲ್ಲಿ ಕಾಣಿಸಿಕೊಂಡಿಲ್ಲ ಎಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...