alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯ ಹುಡುಗಿ ಬೇಡಿಕೆ ಈಡೇರಿಸಿ ಅಭಿಮಾನಿಗಳ ಮನಗೆದ್ದ ಫೆಡರರ್

ಎಂಟು ಬಾರಿ ವಿಂಬಲ್ಡನ್ ಚಾಂಪಿಯನ್ ಸ್ವಿಟ್ಜರ್ಲೆಂಡ್ ನ ರೋಜರ್ ಫೆಡರರ್ ವರ್ಷದ ಮೂರನೇ ಗ್ರ್ಯಾಂಡ್ ಸ್ಲ್ಯಾಮ್ ಮುಡಿಗೇರಿಸಿಕೊಳ್ಳುವ ತವಕದಲ್ಲಿದ್ದಾರೆ. ಸೋಮವಾರ ನಡೆದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಫೆಡರರ್ ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

20 ನೇ ಬಾರಿ ವಿಂಬಲ್ಡನ್ ನಲ್ಲಿ ಪಾಲ್ಗೊಂಡಿರುವ ವಿಶ್ವದ ನಂಬರ್ 2 ಆಟಗಾರ ಫೆಡರರ್ ಆಲ್ ಇಂಗ್ಲೆಂಡ್ ಕ್ಲಬ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸರ್ಬಿಯಾದ ದುಸಾನ್ ಲಾಜೋವಿಕ್ ಅವ್ರನ್ನು 6-1, 6-3, 6-4 ಅಂಕದಿಂದ ಸೋಲಿಸಿದ್ರು. ಭರ್ಜರಿ ಗೆಲುವಿನ ನಂತ್ರ ಅದ್ಭುತ ಘಟನೆಯೊಂದು ಮೈದಾನದಲ್ಲಿ ನಡೆಯಿತು.

ರೋಜರ್ ಫೆಡರರ್ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡುವ ವೇಳೆ ಮುಗ್ಧ ಅಭಿಮಾನಿಯೊಬ್ಬಳು ಫೆಡರರ್ ಮುಂದೆ ಕ್ಯೂಟ್ ಬೇಡಿಕೆಯಿಟ್ಟಿದ್ದಳು. ಪೆಡರರ್ ಹೆಡ್ ಬ್ಯಾಂಡ್ ನೀಡುವಂತೆ ಆಕೆ ಬೇಡಿಕೆಯಿಟ್ಟಿದ್ದಳು. ಆಟಕ್ಕಿಂತ ಮೊದಲು ಹಿಂದೆ ಕುಳಿತಿದ್ದ ಹುಡುಗಿ ಪಂದ್ಯ ಮುಗಿಯುತ್ತಿದ್ದಂತೆ ಪೋಸ್ಟರ್ ಹಿಡಿದು ಮುಂದೆ ಬಂದಿದ್ದಳು.

ಆಕೆ ಬೇಡಿಕೆಗೆ ಸ್ಪಂದಿಸಿದ ಫೆಡರರ್ ಫಿಟ್ಬ್ಯಾಗ್ ನಲ್ಲಿದ್ದ ಹೆಡ್ ಬ್ಯಾಂಡ್ ನೀಡಿದ್ರು. ಇದನ್ನು ತೆಗೆದುಕೊಂಡ ಅಭಿಮಾನಿ ಮಿಹಿಕಾ ಜೋಶಿ ಖುಷಿಯಲ್ಲಿ ತೇಲಿಹೋದ್ಲು. ಮಿಹಿಕಾ ಭಾರತೀಯಳು ಎನ್ನಲಾಗಿದೆ. ಸೌಮ್ಯ ಸ್ವಭಾವ ಹಾಗೂ ಉತ್ತಮ ಆಟದ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದಿರುವ ಫೆಡರರ್ ಹೆರ್ ಬ್ಯಾಂಡ್ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...