alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಹಮ್ಮದ್ ಕೈಫ್ ನಂತ್ರ ಕ್ರಿಕೆಟ್ ಗೆ ವಿದಾಯ ಹೇಳಿದ ಇನ್ನೊಬ್ಬ ಆಟಗಾರ

ಟೀಂ ಇಂಡಿಯಾ ಆಟಗಾರ ಪರ್ವಿಂದರ್ ಅವಾನ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಮಂಗಳವಾರ ಜುಲೈ 17 ರಂದು ಪರ್ವಿಂದರ್ ವಿದಾಯದ ಘೋಷಣೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧ 2 ಟಿ-20 ಪಂದ್ಯಗಳನ್ನಾಡಿದ್ದ ಪರ್ವಿಂದರ್ ದೆಹಲಿ ಪರ 9 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದರು.

2012 ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 2 ಟಿ-20 ಪಂದ್ಯಗಳಲ್ಲಿ ಅವಾನ ಆಟವಾಡಿದ್ದರು. ಆದ್ರೆ ಈ ಎರಡೂ ಪಂದ್ಯಗಳಲ್ಲಿ ವಿಕೆಟ್ ಪಡೆಯಲು ಅವಾನ್ ವಿಫಲರಾಗಿದ್ದರು. ಈಗ ಅವಾನ ಎಲ್ಲ ರೀತಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಟ್ವೀಟರ್ ನಲ್ಲಿ ವಿದಾಯದ ಘೋಷಣೆ ಮಾಡಿದ್ದಾರೆ.

ಟ್ವೀಟರ್ ನಲ್ಲಿ ಅವಾನ, ಟೀಂ ನ ಸದಸ್ಯರು, ತರಬೇತುದಾರ, ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ. ದೇಶವನ್ನು ಪ್ರತಿನಿಧಿಸುವುದು ಹಾಗೂ ಡಿಡಿಸಿಎ ಪರ ಆಟವಾಡುವುದು ನನಗೆ ಹೆಮ್ಮೆಯ ವಿಚಾರವೆಂದು ಅವಾನ ಹೇಳಿದ್ದಾರೆ. ಯುವ ಆಟಗಾರರಿಗೆ ಅವಕಾಶ ನೀಡಬೇಕು. ನನಗೆ ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಅವಾನ ಹೇಳಿದ್ದಾರೆ.

31 ವರ್ಷದ ಅವಾನ 2007 ರಲ್ಲಿ ಮೊದಲ ಪಂದ್ಯವಾಡಿದ್ದರು. ಮೊದಲ ಪಂದ್ಯದಲ್ಲಿ ಒಂದೇ ವಿಕೆಟ್ ಪಡೆದಿದ್ದ ಅವಾನ ಎರಡನೇ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...