alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಿಯನ್ ರಿಚರ್ಡ್ಸ್ ಬರ್ತಡೇಗೆ ಮಗಳಿಂದ ಸರ್ಪ್ರೈಸ್ ಗಿಫ್ಟ್

ವೆಸ್ಟ್ ಇಂಡೀಸ್ ನ ಮಾಜಿ ಕ್ರಿಕೆಟಿಗ ವಿವಿಯನ್ ರಿಚರ್ಡ್ 66 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವಾರು ಗಣ್ಯರು ವಿವಿಯನ್ ರಿಚರ್ಡ್ಸ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.

ಈ ಮಧ್ಯೆ ವಿವಿಯನ್ ರಿಚರ್ಡ್ಸ್ ಹಾಗೂ ನಟಿ ನೀನಾ ಗುಪ್ತಾರ ಪುತ್ರಿ ಮಸಬಾ ಗುಪ್ತಾ, ಹುಟ್ಟು ಹಬ್ಬದಂದು ತಂದೆಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. ವಿವಿಯನ್ ರಿಚರ್ಡ್ ದುಬೈನಲ್ಲಿದ್ದ ವೇಳೆ ತಮ್ಮ ತಾಯಿ ನೀನಾ ಗುಪ್ತಾರನ್ನು ಜೊತೆಗೆ ಕರೆದುಕೊಂಡು ಹೋಗಿದ್ದು, ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿವಿಯನ್ ರಿಚರ್ಡ್ಸ್ ಕೇಕ್ ಕಟ್ ಮಾಡಿದ್ದಾರೆ.

ವಿವಿಯನ್ ರಿಚರ್ಡ್ ಕ್ರಿಕೆಟ್ ನಲ್ಲಿ ಖ್ಯಾತಿಯ ಉತ್ತುಂಗದಲ್ಲಿದ್ದಾಗಲೇ ಬಾಲಿವುಡ್ ನಟಿ ನೀನಾ ಗುಪ್ತಾ ಅವರ ಜೊತೆ ಲಿವ್ ಇನ್ ರಿಲೇಶನ್ ನಲ್ಲಿದ್ದು, ವಿವಾಹವಾಗದೇ ಮಗುವಿಗೆ ಜನ್ಮ ನೀಡಿದ್ದರು. ಇದು ಹಲವರು ಹುಬ್ಬೇರುವಂತೆ ಮಾಡಿತ್ತಾದರೂ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನೀನಾ ಗುಪ್ತಾ ಮಗಳು ಮಸಬಾಳ ಆರೈಕೆಯಲ್ಲಿ ಅದೆಲ್ಲವನ್ನೂ ಮರೆತಿದ್ದರು. 2008 ರಲ್ಲಿ ದೆಹಲಿ ಮೂಲದ ಉದ್ಯಮಿ ವಿವೇಕ್ ಮೆಹ್ರಾ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು ನೀನಾ. ವಿವಿಯನ್ ರಿಚರ್ಡ್ಸ್ ಸಹ ಮರಿಯಂ ಎಂಬಾಕೆಯನ್ನು ವಿವಾಹವಾಗಿದ್ದು, ಇವರಿಗೆ ಇಬ್ಬರು ಪುತ್ರಿಯರಿದ್ದಾರೆ.

ವಿವಿಯನ್ ರಿಚರ್ಡ್ಸ್ ತಮ್ಮ ಮತ್ತೊಬ್ಬ ಪುತ್ರಿ ಮಸಬಾ ಜೊತೆ ಸಂಪರ್ಕವಿಟ್ಟುಕೊಂಡಿದ್ದರೂ ನೀನಾ ಗುಪ್ತಾರನ್ನು ಬಹು ಕಾಲ ಭೇಟಿಯಾಗಿರಲಿಲ್ಲ. ಇದೀಗ ವಿವಿಯನ್ ರಿಚರ್ಡ್ಸ್ ಅವರ 66 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮಸಬಾ ತನ್ನ ತಂದೆ-ತಾಯಿ ಭೇಟಿಯಾಗುವಂತೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...