alex Certify
ಕನ್ನಡ ದುನಿಯಾ       Mobile App
       

Kannada Duniya

ಹೀನಾಯ ಸೋಲಿಗೆ ಆಕ್ರೋಶ, ಆಟಗಾರರ ಮನೆಗೆ ಹೈ ಸೆಕ್ಯುರಿಟಿ

tv-ata

ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಹೀನಾಯವಾಗಿ ಸೋಲು ಕಂಡಿರುವುದಕ್ಕೆ ಟೀಂ ಇಂಡಿಯಾ ಅಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕಾನ್ಪುರ್, ಕೊಪ್ಪಳ ಸೇರಿದಂತೆ ಅನೇಕ ಕಡೆಗಳಲ್ಲಿ ಅಭಿಮಾನಿಗಳು ಆಟಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿ.ವಿ. ಸೆಟ್ ಗಳನ್ನು ಒಡೆದು ಹಾಕಿದ್ದಾರೆ.

ಟ್ರೋಫಿ ಗೆಲ್ಲದಿದ್ದರೂ, ಅಡ್ಡಿಯಿಲ್ಲ, ಬೇರೆ ತಂಡಗಳ ಎದುರು ಸೋತರೂ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಸೋತಿದ್ದು, ಅದರಲ್ಲಿಯೂ ಹೀನಾಯ ಸೋಲು ಕಂಡಿದ್ದು ಸರಿಯಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿ.ವಿ., ಪೋಸ್ಟರ್ ಹಾಳು ಮಾಡಿದ್ದಲ್ಲದೇ, ಆಟಗಾರರ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಹಾಸ್ಯ ಮಾಡಲಾಗಿದೆ. ಕಾನ್ಪುರದಲ್ಲಿ ಆಟಗಾರರ ಪೋಸ್ಟರ್ ಗಳಿಗೆ ಬೆಂಕಿ ಹಚ್ಚಲಾಗಿದೆ.

ರಾಂಚಿಯಲ್ಲಿರುವ ಧೋನಿ ನಿವಾಸಕ್ಕೆ ಹೈ ಸೆಕ್ಯುರಿಟಿ ಒದಗಿಸಲಾಗಿದೆ. ಅದೇ ರೀತಿ ಟೀಂ ಇಂಡಿಯಾ ಆಟಗಾರರ ನಿವಾಸಗಳಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...