alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಕ್ಸಿಂಗ್ ಪಂದ್ಯದ ಟಿಕೆಟ್ ದರ ಕೇಳಿ ಬೆವರ್ತಿದ್ದಾರೆ ಪ್ರೇಕ್ಷಕರು

mayweatherr-759

ಫ್ಲಾಯ್ಡ್ ಮೇವೆದರ್, ಕೊನೊರ್ ಮೆಕ್ ಗ್ರೆಗೊರ್ ಇಬ್ಬರೂ ಬಾಕಿಂಗ್ಸ್ ಕಿಂಗ್ಸ್. ಅವರ ಮಧ್ಯೆ ಬಿಗ್ ಫೈಟ್ ಅಂದ್ರೆ ಅದು ಅತ್ಯಂತ ರೋಚಕವಾಗಿರೋದ್ರಲ್ಲಿ ಅನುಮಾನವೇ ಇಲ್ಲ. ಲಾಸ್ ವೇಗಾಸ್ ನಲ್ಲಿ ಮೇವೆದರ್ ಹಾಗೂ ಕೊನೊರ್ ನಡುವಣ ಹಣಾಹಣಿಗೆ ವೇದಿಕೆ ಸಜ್ಜಾಗಿದೆ.

ಹೇಗಾದ್ರೂ ಮಾಡಿ ಈ ಪಂದ್ಯವನ್ನು ನೋಡಲೇಬೇಕು ಅಂತಾ ಅಭಿಮಾನಿಗಳು ಕಾಯ್ತಿದ್ದಾರೆ. ಆದ್ರೆ ಬಾಕ್ಸಿಂಗ್ ಮ್ಯಾಚ್ ಟಿಕೆಟ್ ಖರೀದಿಸಿದ್ರೆ ನಿಮ್ಮ ಜೇಬಿಗೆ ಕತ್ತರಿ ಬೀಳೋದಂತೂ ಖಚಿತ. ಪಂದ್ಯದ ಅತ್ಯಂತ ಅಗ್ಗದ ಟಿಕೆಟ್ ಬೆಲೆ ಎಷ್ಟು ಗೊತ್ತಾ? 1675 ಡಾಲರ್.

ಆಗಸ್ಟ್ 26ರಂದು ಮೇವೆದರ್ ಹಾಗೂ ಮೆಕ್ ಗ್ರೊಗರ್ ಮಧ್ಯೆ ಹೈವೋಲ್ಟೇಜ್ ಬಾಕ್ಸಿಂಗ್ ಪಂದ್ಯ ನಡೆಯಲಿದೆ. ಟಿಕೆಟ್ ಬೆಲೆ ಬಹಳ ದುಬಾರಿಯಾಗಿರೋದ್ರಿಂದ ಪಂದ್ಯ ನೋಡಲು ಹೆಚ್ಚಾಗಿ ಸೆಲೆಬ್ರಿಟಿಗಳು, ವಿಐಪಿಗಳು, ಶ್ರೀಮಂತರೇ ಬರಬಹುದು ಅನ್ನೋ ನಿರೀಕ್ಷೆ ಇದೆ.

ಮೇವೆದರ್ ಹಾಗೂ ಮೆಕ್ ಗ್ರೊಗರ್ ಇಬ್ಬರಿಗೂ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅಪರೂಪಕ್ಕೊಮ್ಮೆ ನಡೆಯುವ ಸಮಬಲದ ಹೋರಾಟ ಇದು. ಹಾಗಾಗಿ ಟಿಕೆಟ್ ಕೆಲವೇ ಸೆಕೆಂಡ್ ಗಳಲ್ಲಿ ಸೋಲ್ಡ್ ಔಟ್ ಆಗಲಿದೆ ಅನ್ನೋ ನಿರೀಕ್ಷೆ ಸಂಘಟಕರಿಗಿದೆ. ಈಗಾಗ್ಲೇ ಟಿಕೆಟ್ ಮಾರಾಟದಿಂದ 60 ಮಿಲಿಯನ್ ಹಣ ಕೂಡ ಸಂಗ್ರಹವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...