alex Certify
ಕನ್ನಡ ದುನಿಯಾ       Mobile App
       

Kannada Duniya

ಟಿ.ವಿ. ಮುಂದೆ ಕುಳಿತ ಜನ, ಎಲ್ಲೆಡೆ ಬಂದ್ ವಾತಾವರಣ

CENTURION, SOUTH AFRICA - SEPTEMBER 26: Fans cheer on their team during the ICC Champions Trophy group A match between India and Pakistan at Centurion on September 26, 2009 in Centurion, South Africa. (Photo by Tom Shaw/Getty Images)

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿವೆ.

ಟಾಸ್ ಗೆದ್ದ ಪಾಕ್ ನಾಯಕ ಸರ್ಫರಾಜ್ ಅಹ್ಮದ್ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ಹೈ ವೋಲ್ಟೇಜ್ ಮ್ಯಾಚ್ ನೋಡಲು ಕ್ರಿಕೆಟ್ ಅಭಿಮಾನಿಗಳು ಟಿ.ವಿ. ಮುಂದೆ ಕುಳಿತಿದ್ದಾರೆ.

ಭಾನುವಾರ ರಜೆ ದಿನವಾಗಿದ್ದರಿಂದ ಮೊದಲೇ ಬಣಗುಟ್ಟುತ್ತಿದ್ದ ರಸ್ತೆಗಳು, ಟೀಂ ಇಂಡಿಯಾ –ಪಾಕಿಸ್ತಾನ ನಡುವಿನ ಪಂದ್ಯದಿಂದಾಗಿ ಬಿಕೋ ಎನ್ನುತ್ತಿವೆ.

ಕ್ರಿಕೆಟ್ ಅಭಿಮಾನಿಗಳೆಲ್ಲಾ ಮನೆ ಸೇರಿಕೊಂಡಿದ್ದು, ಜನರೆಲ್ಲ ಟಿ.ವಿ. ಮುಂದೆ ಕುಳಿರಿತುವುದರಿಂದ ರಸ್ತೆಗಳು ಖಾಲಿಯಾಗಿವೆ.

ಕೆಲವೆಡೆ ಪಂದ್ಯ ವೀಕ್ಷಣೆಗೆ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ಸ್ನೇಹಿತರು ಗುಂಪುಗೂಡಿ ಒಂದೇ ಕಡೆ ವೀಕ್ಷಣೆಯಲ್ಲಿ ತೊಡಗಿದ್ದಾರೆ.

ಬಹುದಿನಗಳ ಬಳಿಕ ಭಾರತ ಮತ್ತು ಪಾಕ್ ಮುಖಾಮುಖಿಯಾಗುತ್ತಿರುವುದರಿಂದ ಸಹಜವಾಗಿಯೇ ಕುತೂಹಲ ಹೆಚ್ಚಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...