alex Certify
ಕನ್ನಡ ದುನಿಯಾ       Mobile App
       

Kannada Duniya

ಪಂದ್ಯ ವೀಕ್ಷಿಸುವಾಗ ಮಾನಗೇಡಿ ಕೆಲಸ ಮಾಡಿದ

ಲಂಡನ್: ಫುಟ್ ಬಾಲ್ ಪಂದ್ಯ ವೀಕ್ಷಿಸಲು ಬಂದ ವ್ಯಕ್ತಿಯೊಬ್ಬ ಗೋಲ್ ಕೀಪರ್ ಕುಡಿಯುವ ನೀರಿನ ಬಾಟಲಿಯಲ್ಲಿ ಮೂತ್ರ ವಿಸರ್ಜಿಸಿದ ವಿಲಕ್ಷಣ ಘಟನೆ ನಡೆದಿದೆ. ಇಂತಹ ಕೃತ್ಯವೆಸಗಿದ ಕಿಡಿಗೇಡಿಯನ್ನು ಬಂಧಿಸಲಾಗಿದೆ.

ಲಂಡನ್ ನ ಲೋಫ್ಟಸ್ ರೋಡ್ ಮೈದಾನದಲ್ಲಿ ಮಿಡ್ಲ್ ಬರ್ಗ್ ಮತ್ತು ಕ್ವೀನ್ಸ್ ಪಾರ್ಕ್ ರೇಂಜರ್ಸ್ ತಂಡಗಳ ನಡುವೆ ಫುಟ್ ಬಾಲ್ ಪಂದ್ಯ ನಡೆದಿದ್ದು, ಹೆಚ್ಚಿನ ಅಭಿಮಾನಿಗಳು ವೀಕ್ಷಣೆಗೆ ಸೇರಿದ್ದಾರೆ.

ಕ್ವೀನ್ಸ್ ಪಾರ್ಕ್ ರೇಂಜರ್ಸ್ ತಂಡದ ಅಭಿಮಾನಿ ಪಂದ್ಯ ವೀಕ್ಷಿಸುತ್ತಲೇ ಗೋಲ್ ಕೀಪರ್ ಬಾಟಲಿಯಲ್ಲಿ ಮೂತ್ರ ವಿಸರ್ಜಿಸಿ ಅದನ್ನು ಗೋಲ್ ನೆಟ್ ಬಳಿಗೆ ಎಸೆದಿದ್ದಾನೆ.

ಗೋಲ್ ಕೀಪರ್ ಎಲೆಕ್ಸ್ ಸ್ಮಿತೀಸ್ ಇದನ್ನು ಸೇವಿಸಿದ್ದಾರೆಯೇ ಎಂಬುದರ ಬಗ್ಗೆ ಗೊತ್ತಾಗಿಲ್ಲ. ಬಾಟಲಿಯಲ್ಲಿ ಮೂತ್ರ ವಿಸರ್ಜಿಸಿ ಗೋಲ್ ನೆಟ್ ಬಳಿಗೆ ಎಸೆದ ಕಿಡಿಗೇಡಿಯ ಕೃತ್ಯ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಗಮನಕ್ಕೆ ಬರುತ್ತಲೇ ಕ್ರಮಕೈಗೊಂಡ ಕ್ಲೇವ್ ಲ್ಯಾಂಡ್ ಪೊಲೀಸರು ಕಿಡಿಗೇಡಿಯನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...