alex Certify
ಕನ್ನಡ ದುನಿಯಾ       Mobile App
       

Kannada Duniya

‘200 ಕ್ಲಬ್’​ ಸೇರಿದ ಪಾಕ್​ ಕ್ರಿಕೆಟಿಗ

ಪಾಕಿಸ್ತಾನದ ಸ್ಟಾರ್​ ಓಪನರ್​​ ಫಖಾರ್​ ಜಮನ್​​, ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. 4ನೇ ಪಂದ್ಯದಲ್ಲಿ ಫಖಾರ್​​ ದ್ವಿಶತಕದ ಸಾಧನೆ ಮಾಡಿ ಬೀಗಿದ್ದಾರೆ.

ಜಿಂಬಾಬ್ವೆ ಪ್ರವಾಸದಲ್ಲಿರುವ ಪಾಕಿಸ್ತಾನ ಭರ್ಜರಿ ಪ್ರದರ್ಶನ ನೀಡ್ತಾ ಇದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಪಾಕ್​ ಓಪನರ್​ ಅಪರೂಪದ ಆಟ ಆಡಿ ಗಮನ ಸೆಳೆದಿದ್ದಾರೆ. ತಮ್ಮ ನೈಜ ಆಟ ಆಡಿದ ಫಖಾರ್​ ಜಮನ್,​ ವಿಶ್ವ ಕ್ರಿಕೆಟ್ ​ನಲ್ಲಿ ಬೆರಳೆಣಿಕೆಯಷ್ಟು ಆಟಗಾರರು ಮಾಡಿದ ಸಾಧನೆ ಮಾಡಿದ್ದಾರೆ.

ಫಖಾರ್​, 156 ಎಸೆತಗಳಲ್ಲಿ 24 ಬೌಂಡರಿ, 5 ಸಿಕ್ಸರ್​ ಸಹಾಯದಿಂದ 210 ರನ್​ ಬಾರಿಸಿದ್ರು. ಈ ಮೂಲಕ ಫಖಾರ್​ ‘200 ಕ್ಲಬ್​’ ಗೆ ಎಂಟ್ರಿ ನೀಡಿದ್ದಾರೆ. ಈ ಮೊದಲು ಈ ಸಾಧನೆಯನ್ನು ಐದು ಆಟಗಾರರು, ಏಳು ಬಾರಿ ಮಾಡಿದ್ದಾರೆ. ಭಾರತದ ರೋಹಿತ್​ ಶರ್ಮ ಮೂರು ದ್ವಿಶತಕ ಬಾರಿಸಿದ ಹಿರಿಮೆ ಹೊಂದಿದ್ದಾರೆ. ವಿಶ್ವ ಕ್ರಿಕೆಟ್​ ನಲ್ಲಿ ಈ ಸಾಧನೆಯನ್ನು ಮೊದಲು ಮಾಡಿದ ಕೀರ್ತಿ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​​ಗೆ ಸಲ್ಲುತ್ತದೆ.

ಏಕದಿನ ಕ್ರಿಕೆಟ್​ನಲ್ಲಿ 200 ರನ್ ಬಾರಿಸಿದ ಆಟಗಾರರು
ಸಚಿನ್​ ತೆಂಡೂಲ್ಕರ್​​ 200*
ವೀರೇಂದ್ರ ಸೆಹ್ವಾಗ್​ 219*
ರೋಹಿತ್ ಶರ್ಮಾ 209
ರೋಹಿತ್ ಶರ್ಮಾ 264*
ಕ್ರಿಸ್​​ ಗೇಲ್​​ 215
ಮಾರ್ಟಿನ್​ ಗುಪ್ಟಿಲ್​​ 237*
ರೋಹಿತ್ ಶರ್ಮಾ 208*
ಫಖಾರ್​ ಜಮನ್​ 210*.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...