alex Certify
ಕನ್ನಡ ದುನಿಯಾ       Mobile App
       

Kannada Duniya

ಏಕದಿನ ಪಂದ್ಯಗಳಲ್ಲಿ ವಿಶ್ವ ದಾಖಲೆ ಬರೆದ ಕ್ರಿಕೆಟಿಗ

ಇತ್ತೀಚೆಗಷ್ಟೆ ಜಿಂಬಾಂಬ್ವೆ ವಿರುದ್ಧದ ಏಕದಿನ ಪಂದ್ಯದಲ್ಲಿ ದ್ವಿಶತಕದ ಸಾಧನೆ ಮಾಡಿದ್ದ ಪಾಕಿಸ್ತಾನದ ಸ್ಫೋಟಕ ಬ್ಯಾಟ್ಸ್ ಮನ್ ಫಖಾರ್ ಜಮಾನ್ ಮತ್ತೊಂದು ವಿಶ್ವದಾಖಲೆಯನ್ನ ಬರೆದಿದ್ದಾರೆ.

ಜಿಂಬಾಬ್ವೆ ವಿರುದ್ಧ ನಡೆದ ಐದನೇ ಮತ್ತು ಅಂತಿಮ ಪಂದ್ಯದಲ್ಲಿ ಫಖಾರ್ ಏಕದಿನ ಪಂದ್ಯಗಳಲ್ಲಿ ವೇಗವಾಗಿ 1000 ರನ್ ಪೂರೈಸಿದ ದಾಖಲೆ ಬರೆದಿದ್ದಾರೆ. ಕಡಿಮೆ ಇನ್ನಿಂಗ್ಸ್ ಗಳಲ್ಲಿ 1000 ರನ್ ಬಾರಿಸಿದ ಬ್ಯಾಟ್ಸ್ ಮನ್ ಅನ್ನೋ ದಾಖಲೆ ಫಖಾರ್ ಜಮಾನ್ ಹೆಸರಿಗೆ ಶಿಫ್ಟ್ ಆಗಿದೆ. ಕೇವಲ 18 ಇನ್ನಿಂಗ್ಸ್ ಗಳಲ್ಲಿ ಫಖಾರ್ ಈ ಸಾಧನೆ ಮಾಡಿದ್ದಾರೆ.

ಜಿಂಬಾಬ್ವೆ ವಿರುದ್ಧದ ಅಂತಿಮ ಏಕದಿನದ ಪಂದ್ಯದಲ್ಲಿ 85ರನ್ ಗಳಿಸಿ ಔಟ್ ಆದ ಫಖಾರ್ ವಿವಿಯನ್ ರಿಚರ್ಡ್ಸನ್ ದಾಖಲೆಯನ್ನು ಮೀರಿ ನಿಂತಿದ್ದಾರೆ. ವೆಸ್ಟ್ ಇಂಡೀಸ್ ನ ಬ್ಯಾಟಿಂಗ್ ದೈತ್ಯ ವಿವಿಯನ್ ರಿಚರ್ಡ್ಸನ್ ಹೆಸರಿಲ್ಲಿ ಇದುವರೆಗೂ ಕಡಿಮೆ ಇನ್ನಿಂಗ್ಸ್ ಗಳಲ್ಲಿ 1000 ರನ್ ಪೂರೈಸಿದ ದಾಖಲೆ ಇತ್ತು. ರಿಚರ್ಡ್ಸನ್ 21 ಇನ್ನಿಂಗ್ಸ್ ಗಳಲ್ಲಿ 1000 ರನ್ ಪೂರೈಸಿದ್ದರು.

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮ್ತತು ಶಿಖರ್ ಧವನ್ ತಲಾ 24 ಇನ್ನಿಂಗ್ಸ್ ಗಳಲ್ಲಿ 1000 ರನ್ ಪೂರೈಸಿದ್ದರು. ಈಗ ಏಕದಿನ ಕ್ರಿಕೆಟ್ ನ ಇತಿಹಾಸದಲ್ಲೇ ಕಡಿಮೆ ಇನ್ನಿಂಗ್ಸ್ ಗಳಲ್ಲಿ 1000ರನ್ ಬಾರಿಸಿದ ಶ್ರೇಯ ಪಾಕಿಸ್ತಾನಿ ಬ್ಯಾಟ್ಸ್ ಮನ್ ಹೆಸರಿನಲ್ಲಿ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...