alex Certify
ಕನ್ನಡ ದುನಿಯಾ       Mobile App
       

Kannada Duniya

BCCI ಡಿಜಿಟಲ್ ಹಕ್ಕಿಗಾಗಿ ಫೇಸ್ಬುಕ್-ಗೂಗಲ್ ಮಧ್ಯೆ ಪೈಪೋಟಿ

5 ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ನ ಆನ್ ಲೈನ್ ಹಕ್ಕುಗಳನ್ನು ಪಡೆಯಲು ಗೂಗಲ್ ಹಾಗೂ ಫೇಸ್ಬುಕ್ ಪೈಪೋಟಿಗೆ ಬಿದ್ದಿವೆ. ರಿಲಯೆನ್ಸ್ ಜಿಯೋ ಇನ್ಫೋಕಾಮ್ ಹಾಗೂ ಹಾಟ್ ಸ್ಟಾರ್ ಕೂಡ ರೇಸ್ ನಲ್ಲಿವೆ.

ಮಾರ್ಚ್ 27ರಿಂದ ಎಪ್ರಿಲ್ 3ರವರೆಗೆ ಹರಾಜು ಪ್ರಕ್ರಿಯೆ ನಡೆಯಬೇಕಿತ್ತು. ಆದ್ರೆ ಬಿಸಿಸಿಐ ಇದನ್ನು ಮುಂದೂಡಿದೆ. ಐಐಟಿ ಹಕ್ಕುಗಳ ಅವಧಿ ಎಪ್ರಿಲ್ 2018ರಿಂದ 2023ರ ಮಾರ್ಚ್ ವರೆಗೂ ಇರಲಿದೆ.

ಗ್ಲೋಬಲ್ ಟೆಲಿವಿಶನ್ ರೈಟ್ಸ್ ಮತ್ತು ರಾ ಡಿಜಿಟಲ್ ರೈಟ್ಸ್ ಪ್ಯಾಕೇಜ್, ಇಂಡಿಯನ್ ಸಬ್ ಕಾಂಟಿನೆಂಟ್ ಡಿಜಿಟಲ್ ರೈಟ್ಸ್ ಪ್ಯಾಕೇಜ್ ಹಾಗೂ ಗ್ಲೋಬಲ್ ಕನ್ಸಾಲಿಡೇಟೆಡ್ ರೈಟ್ಸ್ ಪ್ಯಾಕೇಜ್ ಹರಾಜಿಗಿದೆ.

ಡಿಜಿಟಲ್ ಹಕ್ಕುಗಳನ್ನು ಪಡೆಯಲು 5 ವರ್ಷಗಳಿಗೆ, ಪ್ರತಿ ಪಂದ್ಯಕ್ಕೆ 8 ಕೋಟಿ ರೂಪಾಯಿ ಹಾಗೂ 4 ವರ್ಷಗಳಿಗೆ 7 ಕೋಟಿ ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಟಿವಿ ಹಕ್ಕುಗಳಿಗೆ ಪ್ರತಿ ಪಂದ್ಯಕ್ಕೆ 35 ಕೋಟಿ ರೂಪಾಯಿ 5 ವರ್ಷಗಳಿಗೆ, ಹಾಗೂ 4 ವರ್ಷಗಳಿಗೆ 33 ಕೋಟಿ ರೂಪಾಯಿ ನಿಗದಿಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...