alex Certify
ಕನ್ನಡ ದುನಿಯಾ       Mobile App
       

Kannada Duniya

ಎದೆಗುಂದದೆ ಗುರಿ ಮುಟ್ಟಿದ ಅಥ್ಲೀಟ್ ಗೆ ಹೇಳಿ ಹ್ಯಾಟ್ಸಾಫ್

Ethiopia's Etenesh Diro competes in the Women's 3000m Steeplechase Round 1 during the athletics event at the Rio 2016 Olympic Games at the Olympic Stadium in Rio de Janeiro on August 13, 2016. / AFP PHOTO / Jewel SAMADJEWEL SAMAD/AFP/Getty Images ORIG FILE ID: AFP_EN5LP

ರಿಯೋ ಡಿ ಜನೈರೋ: ಬ್ರಿಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್ ಹಲವು ವಿಶೇಷ ಘಟನೆಗಳಿಗೆ ಸಾಕ್ಷಿಯಾಗಿದೆ. ಅಂತಹ ಘಟನೆಯೊಂದರ ವರದಿ ಇಲ್ಲಿದೆ ನೋಡಿ.

ಒಂದೇ ಶೂನಲ್ಲಿ ಅಥ್ಲೀಟ್ ಒಬ್ಬರು ಗುರಿ ತಲುಪಿದ ಘಟನೆ ರಿಯೋದಲ್ಲಿ ನಡೆದಿದೆ. ರಿಯೋ ಒಲಿಂಪಿಕ್ಸ್ ಗ್ರಾಮದ ಮಾರ್ಕಾನ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ 3000 ಮೀಟರ್ ಸ್ಟೀಪಲ್ ಚೇಸ್ ವಿಭಾಗದಲ್ಲಿ ಇಥಿಯೋಪಿಯಾದ 25 ವರ್ಷದ ಅಥ್ಲೀಟ್ ಇಥೆನ್ಸಾ ಡಿರೋ ಓಡುವಾಗ, ಶೂ ಕಟ್ ಆಗಿದೆ. ಅದನ್ನು ಸರಿಪಡಿಸಿಕೊಂಡರೆ ಸಮಯ ವ್ಯರ್ಥವಾದೀತು ಎಂದರಿತ ಆಕೆ ಒಂದೇ ಶೂ ಧರಿಸಿಕೊಂಡೇ ಓಡಿ ನಿಗದಿತ ಗುರಿ ತಲುಪಿದ್ದಾರೆ. ಆದರೆ, ಫೈನಲ್ ಗೆ ಎಂಟ್ರಿ ಪಡೆಯಲು ಆಕೆಗೆ ಸಾಧ್ಯವಾಗಲಿಲ್ಲ.

ಶೂ ಕಳಪೆಯಾಗಿತ್ತೋ ಏನೋ ಅರ್ಧ ಓಟ ಕ್ರಮಿಸಿದ್ದಾಗಲೇ ಕಟ್ ಆಗಿದೆ. ಸ್ಪರ್ಧೆಯಲ್ಲಿದ್ದ 25 ಮಂದಿಯಲ್ಲಿ ಇಥೆನ್ಸಾ ಡಿಯೋ 7 ನೇ ಸ್ಥಾನ ಪಡೆದುಕೊಂಡಿದ್ದಾರೆ. ಪ್ರತಿ ಹೀಟ್ ನಲ್ಲಿ ಮೊದಲ 3 ಸ್ಥಾನ ಪಡೆದವರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.

ಶೂ ಕಟ್ ಆಗಿ ಒಂದೇ ಶೂನಲ್ಲಿ ಓಡಿದರೂ ಫೈನಲ್ ಪ್ರವೇಶಕ್ಕೆ ಸ್ಥಾನ ಪಡೆಯಲು ಸಾಧ್ಯವಾಗದಿರುವುದಕ್ಕೆ ಇಥೆನ್ಸಾ ಡಿಯೋ ಕಣ್ಣೀರಿಟ್ಟಿದ್ದಾಳೆ. ಆಕೆಗೆ ಸಹ ಸ್ಪರ್ಧಿಗಳು ಸಮಾಧಾನಪಡಿಸಿದ್ದಾರೆ. ಇಥೆನ್ಸಾ ಶೂ ಸರಿಯಾಗಿದ್ದರೆ ಫೈನಲ್ ಗೆ ಪ್ರವೇಶ ಪಡೆಯುವ ವಿಶ್ವಾಸದಲ್ಲಿದ್ದಳು. ಆದರೆ, ಅದು ಕೈಗೂಡಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...