alex Certify
ಕನ್ನಡ ದುನಿಯಾ       Mobile App
       

Kannada Duniya

10ನೇ ಬಾರಿಗೆ ವಿಶ್ವಕಪ್ ವೀಕ್ಷಿಸಲು ರಷ್ಯಾಕ್ಕೆ ತೆರಳುತ್ತಿದ್ದಾರೆ ವೃದ್ಧ ದಂಪತಿ

ಆ ವೃದ್ಧ ವ್ಯಕ್ತಿಗೆ ಈಗ 85 ವರ್ಷ. ಅವರ ಪತ್ನಿಗೆ 76 ವರ್ಷ. ಬೇರೆಯವರಾದರೆ ಈ ವಯಸ್ಸಿನಲ್ಲಿ ಆರಾಮಾಗಿ ಇರಲು ಬಯಸುತ್ತಾರೆ. ಆದರೆ ಇಷ್ಟು ವಯಸ್ಸಾದರೂ ಈ ವೃದ್ಧ ದಂಪತಿಗಳ ಫುಟ್ಬಾಲ್ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ತಮ್ಮ ಹತ್ತನೇ ವಿಶ್ವ ಕಪ್ ಪಂದ್ಯ ವೀಕ್ಷಿಸಲು ಈ ದಂಪತಿಗಳು ಈಗ ರಷ್ಯಾಕ್ಕೆ ತೆರಳುತ್ತಿದ್ದಾರೆ.

ಹೌದು….ಕೋಲ್ಕತ್ತಾ ಮೂಲದ 85 ವರ್ಷದ ಪನ್ನಾಲಾಲ್ ಹಾಗೂ ಅವರ ಪತ್ನಿ 76 ವರ್ಷದ ಚೈತಾಲಿ ಕಳೆದ 10 ವರ್ಷಗಳಿಂದ ಮಿಸ್ ಮಾಡದೆ ಫಿಫಾ ವಿಶ್ವಕಪ್ ಪಂದ್ಯಾವಳಿಗಳನ್ನು ವೀಕ್ಷಿಸುತ್ತಿದ್ದಾರೆ. ಯಾವ ದೇಶದಲ್ಲಿ ವಿಶ್ವಕಪ್ ನಡೆಯುತ್ತದೆ ಅಲ್ಲಿಗೆ ತಪ್ಪದೇ ಈ ದಂಪತಿಗಳು ಹಾಜರಾಗುತ್ತಾರೆ.

1982ರಲ್ಲಿ ಸ್ಪೇನ್ ನಲ್ಲಿ ನಡೆದಿದ್ದ ವಿಶ್ವಕಪ್ ವೀಕ್ಷಿಸಲು ಮೊದಲ ಬಾರಿಗೆ ಈ ದಂಪತಿಗಳು ತೆರಳಿದ್ದರು. ಆ ಬಳಿಕ ಇದನ್ನು ತಪ್ಪದೆ ಪಾಲಿಸಿಕೊಂಡು ಬಂದಿದ್ದು, ಇದೀಗ ನಡೆಯುತ್ತಿರುವ ಫಿಫಾ ವಿಶ್ವ ಕಪ್ ವೀಕ್ಷಿಸಲು ಜೂನ್ 14 ರಂದು ರಷ್ಯಾಗೆ ತೆರಳುತ್ತಿದ್ದಾರೆ. ಇದು ದಂಪತಿಗಳ 10ನೇ ವಿಶ್ವಕಪ್ ಪಂದ್ಯವಾಗಿದ್ದು, ತಮಗೆ ಕೇವಲ ಮೂರು ಪಂದ್ಯಗಳ ಟಿಕೆಟ್ ಮಾತ್ರ ಲಭ್ಯವಾಗಿದೆ. ಇನ್ನುಳಿದ ಪಂದ್ಯಗಳ ಟಿಕೆಟ್ ಗಾಗಿ ಪ್ರಯತ್ನ ನಡೆಸುತ್ತಿದ್ದು, ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...