alex Certify
ಕನ್ನಡ ದುನಿಯಾ       Mobile App
       

Kannada Duniya

ವಿಂಡೀಸ್ ಕಡಲ ತೀರದಲ್ಲಿ ಟೀಂ ಇಂಡಿಯಾ ಎಂಜಾಯ್

anil-kumble-virat-kohli 14

ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಿರುವ ಟೀಂ ಇಂಡಿಯಾ ಆಟಗಾರರು ಕೆರಿಬಿಯನ್ ನಾಡಿನ ಸುಂದರ ಕಡಲ ತೀರದಲ್ಲಿ ಈಜಾಡುವ ಮೂಲಕ ಆನಂದಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಆಟಗಾರರು ವಿಂಡೀಸ್ ನಲ್ಲಿ ಟೆಸ್ಟ್ ಪಂದ್ಯಗಳನ್ನಾಡಲಿದ್ದಾರೆ.

ಜುಲೈ 21ರಿಂದ ಆಂಟಿಗುವಾದಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಇದಕ್ಕೆ ಮೊದಲು ಗುರುವಾರದಿಂದ ಅಭ್ಯಾಸ ಪಂದ್ಯ ನಡೆಯಲಿದೆ. ಅಭ್ಯಾಸ ಪಂದ್ಯದ ಮುನ್ನಾ ದಿನ ಟೀಂ ಇಂಡಿಯಾ ಆಟಗಾರರು, ಕೆರೆಬಿಯನ್ ಸುಂದರ ಕಡಲ ತೀರಗಳಲ್ಲಿ ಈಜಾಡುವ ಮೂಲಕ ಆನಂದಿಸಿದ್ದಾರೆ. ಸಮುದ್ರಕ್ಕೆ ಡೈ ಹೊಡೆಯುವುದು, ನೀರೆರಚುವುದು ವಾಲಿಬಾಲ್ ಪ್ರಾಕ್ಟೀಸ್ ಸೇರಿದಂತೆ ವಿವಿಧ ರೀತಿಯಲ್ಲಿ ಎಂಜಾಯ್ ಮಾಡಿದ್ದು, ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ತಮ್ಮ ಕ್ಯಾಮೆರಾದಲ್ಲಿ ಆಟಗಾರರ ಕೆಲವು ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.

ಗುರುವಾರದಿಂದ 3 ದಿನಗಳ ಅಭ್ಯಾಸ ಪಂದ್ಯ ನಡೆಯಲಿದ್ದು, ಗಾಯದ ಸಮಸ್ಯೆಯಿಂದ ದೀರ್ಘಕಾಲ ಹೊರಗುಳಿದಿದ್ದ ಭುವನೇಶ್ವರ್ ಕುಮಾರ್ ಮತ್ತು ಮಹಮ್ಮದ್ ಶಮಿ ತಂಡಕ್ಕೆ ಮರಳಿದ್ದಾರೆ. ಆದರೆ ಇವರಿಬ್ಬರೂ ಲೈನ್ ಅಂಡ್ ಲೆನ್ತ್ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...