alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಬಂಧನ

ಇಂಗ್ಲೆಂಡ್ ನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ರನ್ನು ಬ್ರಿಸ್ಟಲ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧನ ಹಿನ್ನೆಲೆಯಲ್ಲಿ ಬೆನ್ ಸ್ಟೋಕ್ಸ್ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಾರೆ. ರಾತ್ರಿಯಿಡೀ ಪೊಲೀಸರು ವಿಚಾರಣೆಗಾಗಿ ಬೆನ್ ಸ್ಟೋಕ್ಸ್ ರನ್ನು ಠಾಣೆಯಲ್ಲಿ ಇರಿಸಿಕೊಂಡಿದ್ದರು.

ಬೆಳಗ್ಗೆ ಬಿಟ್ಟು ಕಳಿಸಿದ್ದಾರೆ, ಆದ್ರೆ ತನಿಖೆ ಮುಂದುವರಿದಿದೆ. ಘಟನೆ ನಡೆದಾಗ ಸ್ಟೋಕ್ಸ್ ಜೊತೆಗಿದ್ದ ಅಲೆಕ್ಸ್ ಹೇಲ್ಸ್ ರನ್ನು ಕೂಡ ಪಂದ್ಯದಿಂದ ಕೈಬಿಡಲಾಗಿದೆ. ನೈಟ್ ಕ್ಲಬ್ ಒಂದರಲ್ಲಿ ಬೆನ್ ಸ್ಟೋಕ್ಸ್ ಘರ್ಷಣೆಗಿಳಿದಿದ್ರು ಅಂತಾ ಹೇಳಲಾಗ್ತಿದೆ.

ಬೆನ್ ಸ್ಟೋಕ್ಸ್ ಕೈಗೆ ಗಾಯವಾಗಿದೆ. 27 ವರ್ಷದ ವ್ಯಕ್ತಿ ಕೂಡ ಈ ಘಟನೆಯಲ್ಲಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನೈಟ್ ಕ್ಲಬ್ ನಲ್ಲಿ ನಡೆದಿದ್ದೇನು ಎಂಬ ಬಗ್ಗೆ ಪೊಲೀಸರು ಖಚಿತ ಮಾಹಿತಿ ನೀಡಿಲ್ಲ.

ಇನ್ನು ವೆಸ್ಟ್ ಇಂಡೀಸ್ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ಈಗಾಗ್ಲೇ ಮುನ್ನಡೆ ಸಾಧಿಸಿದೆ. ಒಂದು ಪಂದ್ಯ ಮಳೆಗೆ ಆಹುತಿಯಾಗಿದ್ದು, ಇನ್ನೆರಡು ಪಂದ್ಯಗಳನ್ನು ಆಂಗ್ಲರು ಗೆದ್ದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...