alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಲುವಿಗಾಗಿ ಸ್ಪಿನ್ ಬೌಲಿಂಗ್ ಮಶೀನ್ ಮೊರೆ ಹೋದ ಇಂಗ್ಲೆಂಡ್ ತಂಡ

ಮ್ಯಾಂಚೆಸ್ಟರ್ ಅಂಗಳದಲ್ಲಿ ನಡೆದಿದ್ದ ಮೊದಲ ಟಿ-2೦ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಕಂಟಕರಾಗಿದ್ದ, ಭಾರತದ ರಿಸ್ಟ್ ಸ್ಪಿನ್ ಬೌಲರ್ ಕುಲ್ದೀಪ್ ಯಾದವ್ ರಿಗೆ ಉತ್ತರಿಸಲು ಇಂಗ್ಲೆಂಡ್ ಪ್ಲಾನ್ ಮಾಡಿಕೊಂಡಿದೆ.

ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳಿಗೆ ಖೆಡ್ಡಾ ತೋಡಿದ್ದ ಕುಲ್ದೀಪ್ ಭಾರತದ ಜಯದಲ್ಲಿ ಮಿಂಚಿದ್ದರು. ಈ ಕ್ವಾಲಿಟಿ ಸ್ವಿನ್ ಬೌಲರ್ನನ್ನು ಸದೆ ಬಡೆಯಲು ಇಂಗ್ಲೆಂಡ್, ಸ್ಪಿನ್ ಬೌಲಿಂಗ್ ಮಶೀನ್ ಮೊರೆ ಹೋಗಿದೆ.

ಅಂದಹಾಗೆ ಈ ಸ್ಪಿನ್ ಬೌಲಿಂಗ್ ಮಶೀನ್, 2005 ರಲ್ಲಿ ಇಂಗ್ಲೆಂಡ್ ಖರೀದಿ ಮಾಡಿತ್ತು. ಆಗ ಆ್ಯಷಸ್ ಸರಣಿ ಆಡಲು ಈ ಮಶೀನ್ ಸಹಾಯಕವಾಗಿತ್ತು. ಶೇನ್ ವಾರ್ನ್ ರ ದಾಳಿ ಎದುರಿಸಲು ಇಂಗ್ಲೆಂಡ್ ಆಗ ಈ ಮಶೀನ್ ಮೊರೆ ಹೋಗಿತ್ತು.

ಇಂದು ಕಾರ್ಡಿಫ್ ಅಂಗಳದಲ್ಲಿ ಭಾರತದ ಬಲಿಷ್ಠ ಸ್ಪಿನ್ ಬೌಲಿಂಗ್ ಎದುರಿಸಲು, ಇಂಗ್ಲೆಂಡ್ ಪ್ಲಾನ್ ಮಾಡಿಕೊಂಡಿದೆ. ಅದ್ರಂತೆ ಅಭ್ಯಾಸದಲ್ಲಿ ಇಂಗ್ಲೆಂಡ್ ಸ್ಟಾರ್ ಬ್ಯಾಟ್ಸ್ ಮನ್ ಗಳು ಸ್ಪಿನ್ ಬೌಲಿಂಗ್ ಮಶೀನ್ ನಲ್ಲೇ ಹೆಚ್ಚು ಹೊತ್ತು ಬ್ಯಾಟ್ ಮಾಡಿದ್ದಾರೆ. ಇದ್ರಿಂದ ಟೀಮ್ ಇಂಡಿಯಾದ ರಿಸ್ಟ್ ಸ್ಪಿನ್ ಬೌಲರ್ ಗಳನ್ನು ಕಟ್ಟಿ ಹಾಕುವ ಯೋಜನೆ ಇಂಗ್ಲೆಂಡ್ ತಂಡದ್ದಾಗಿದೆ.

ಅಂದಹಾಗೆ ಟೀಮ್ ಇಂಡಿಯಾದ ಪರ ರಿಸ್ಟ್ ಸ್ಪಿನ್ ಬೌಲರ್ಸ್ ಗಳಾದ ಯಜುವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್ ತಮ್ಮ ಶ್ರೇಷ್ಠ ಪ್ರದರ್ಶನ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...