alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಗ್ಲೆಂಡ್ ​ಗೆ ಸರಣಿ ಗೆಲುವಿನ `ರೂಟ್​’ ತೋರಿಸಿದ ಮಾರ್ಗನ್​​

ಅನುಭವಿ ಜೋ ರೂಟ್​ ಬಾರಿಸಿದ ಶತಕ ಹಾಗೂ ನಾಯಕ ಇಯಾನ್​ ಮಾರ್ಗನ್​ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ, ಇಂಗ್ಲೆಂಡ್​​ 8 ವಿಕೆಟ್​​​​ಗಳಿಂದ ಟೀಮ್​ ಇಂಡಿಯಾವನ್ನು ಮಣಿಸಿ, ಏಕದಿನ ಸರಣಿಯನ್ನು ವಶಕ್ಕೆ ಪಡೆದಿದೆ.

ಲೀಡ್ಸ್​ ಅಂಗಳದಲ್ಲಿ ಮಂಗಳವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್​ ಸೋತರೂ ಮೊದಲು ಬ್ಯಾಟ್​ ಮಾಡಿದ ಕೊಹ್ಲಿ ಪಡೆ, 50 ಓವರ್​​ಗಳಲ್ಲಿ 8 ವಿಕೆಟ್​​ಗೆ 256 ರನ್​ ಕಲೆ ಹಾಕಿತು. ಸ್ಪರ್ಧಾತ್ಮಕ ಮೊತ್ತ ಹಿಂಬಾಲಿಸಿದ ಇಂಗ್ಲೆಂಡ್​ 44.3 ಓವರ್​​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 260 ರನ್​ ಕಲೆ ಹಾಕಿ ಗೆಲುವಿನ ಕೇಕೆ ಹಾಕಿತು. ಮೂರು ಏಕದಿನ ಸರಣಿಯನ್ನು ಮಾರ್ಗನ್​ ಪಡೆ 2-1 ರಿಂದ ಗೆದ್ದು ಬೀಗಿತು.

ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಶರ್ಮಾ ರನ್​ ಕಲೆ ಹಾಕುವಲ್ಲಿ ವಿಫಲರಾದ್ರು. ಎರಡನೇ ವಿಕೆಟ್​ಗೆ ವಿರಾಟ್​ ಕೊಹ್ಲಿ ಹಾಗೂ ಶಿಖರ್​ ಧವನ್​ ಎಚ್ಚರಿಕೆಯ ಆಟ ಆಡಿ ತಂಡಕ್ಕೆ 71 ರನ್ ಕಾಣಿಕೆ ನೀಡಿದ್ರು. ಕೊಹ್ಲಿ 72 ಎಸೆತಗಳಲ್ಲಿ 8 ಬೌಂಡರಿ ಸೇರಿದಂತೆ 71 ರನ್​ ಬಾರಿಸಿ ಆರ್ಭಟಿಸಿದ್ರು.

ಉಳಿದಂತೆ ಆರಂಭಿಕ ಶಿಖರ್​ ಧವನ್​​ 44, ಮಹೇಂದ್ರ ಸಿಂಗ್ ಧೋನಿ 42, ಹಾರ್ದಿಕ್​ ಪಾಂಡ್ಯ ಹಾಗೂ ಭುವನೇಶ್ವರ್​ ಕುಮಾರ್​ ತಲಾ 21 ರನ್​ ಬಾರಿಸಿದ್ರು. ಅಂತಿಮವಾಗಿ ಟೀಮ್​ ಇಂಡಿಯಾ 256 ರನ್​ ಕಲೆ ಹಾಕಿತು.

257 ರನ್​ ಗುರಿ ಬೆನ್ನಟ್ಟಿದ ಇಂಗ್ಲೆಂಡ್​ ತಂಡದ ಆರಂಭಿಕರು ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಜಾನಿ ಬೇರ್​ಸ್ಟ್ರೋ ಸ್ಪೋಟಕ ಆಟವಾಡಿ ಗಮನ ಸೆಳೆದ್ರು. ಒಂದು ಹಂತದಲ್ಲಿ ಎರಡು ವಿಕೆಟ್​ ಪಡೆದು, ಪುಟಿದೇಳುವ ಸೂಚನೆ ನೀಡಿದ್ದ ಕೊಹ್ಲಿ ಪಡೆಗೆ ಅನುಭವಿ ಬ್ಯಾಟ್ಸ್​​ಮನ್ಸ್​​ ಶಾಕ್​ ನೀಡಿದ್ರು.

ನಾಯಕ ಇಯಾನ್​ ಮಾರ್ಗನ್​ (ಅಜೇಯ 88) ಹಾಗೂ ಜೋ ರೂಟ್​ (ಅಜೇಯ 100) ಇಂಗ್ಲೆಂಡ್​ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದ್ರು. ಈ ಜೋಡಿ 186 ರನ್​ ಕಲೆ ಹಾಕಿ ತಂಡವನ್ನು ಗೆಲುವಿನ ಗೆರೆ ದಾಟಿಸಿತು. ವಿಕೆಟ್​ ಪಡೆಯುವಲ್ಲಿ ಪರದಾಡಿದ ಟೀಮ್ ಇಂಡಿಯಾ ಬೌಲರ್ಸ್​ ಕೈ ಸುಟ್ಟುಕೊಂಡ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...