alex Certify
ಕನ್ನಡ ದುನಿಯಾ       Mobile App
       

Kannada Duniya

ನೀವೂ ಅಂಪೈರ್ ಆಗಬೇಕಾ? ಸಂಬಳ ಎಷ್ಟು ಗೊತ್ತಾ?

ಕ್ರಿಕೆಟ್ ಮೈದಾನದಲ್ಲಿ ಆಟಗಾರ ಎಷ್ಟೇ ಉತ್ತಮ ಪ್ರದರ್ಶನ ತೋರಲಿ ಅಂಪೈರ್ ನಿರ್ಧಾರವೇ ಅಂತಿಮ ನಿರ್ಧಾರವಾಗಿರುತ್ತದೆ. ಆಟದಲ್ಲಿ ಅಂಪೈರ್ ಮಹತ್ವದ ಪಾತ್ರ ವಹಿಸುತ್ತಾರೆ. ಈ ಅಂಪೈರ್ ಆಗಲು ಏನೆಲ್ಲ ಅರ್ಹತೆ ಬೇಕು ಹಾಗೆ ಎಷ್ಟು ಸಂಬಳ ಸಿಗುತ್ತೆ ಎಂಬುದರ ವಿವರ ಇಲ್ಲಿದೆ.

ಐಪಿಎಲ್ ನಲ್ಲಿ ಅಂಪೈರ್ ಗಳ ಎರಡು ಶ್ರೇಣಿಯಿರುತ್ತದೆ. ಎಲೈಟ್ ಅಂಪೈರ್ ಗಳು ಹಾಗೂ ಪ್ರವೇಶ ಮಟ್ಟದ ಅಂಪೈರ್ಗಳಿರುತ್ತಾರೆ. ಮೂಲಗಳ ಪ್ರಕಾರ ಎಲೈಟ್ ಅಂಪೈರ್ಗಳಿಗೆ 2700 ಡಾಲರ್ ನಿಂದ ಹಿಡಿದು 3200 ಡಾಲರ್ ವರೆಗೆ ಸಂಬಳ ಸಿಗುತ್ತದೆ. ಪ್ರವೇಶ ಹಂತದ ಅಂಪೈರ್ಗಳಿಗೆ 1000 ಡಾಲರ್ ಪ್ರತಿ ಪಂದ್ಯಕ್ಕೆ ಸಿಗುತ್ತದೆ.

ಐಪಿಎಲ್ ಆವೃತ್ತಿ ಬಗ್ಗೆ ಮಾತನಾಡುವುದಾದ್ರೆ ಎಲೈಟ್ ಅಂಪೈರ್ಗಳಿಗೆ 60 ಸಾವಿರ ಡಾಲರ್ ಹಾಗೂ ಪ್ರವೇಶ ಹಂತದ ಅಂಪೈರ್ ಗಳಿಗೆ 20 ಸಾವಿರ ಡಾಲರ್ ( 12 ಲಕ್ಷ ರೂ.) ಸಿಗುತ್ತದೆ.

ಕ್ರೀಡಾ ವೆಬ್ ಸೈಟ್ ಮಾಹಿತಿ ಪ್ರಕಾರ ಟೆಸ್ಟ್ ಹಾಗೂ ಏಕದಿನ ಪಂದ್ಯಗಳ ಅವಧಿ ನೋಡಿ ಸಂಬಳ ನಿರ್ಧರಿಸಲಾಗುತ್ತದೆ. ಸುಮಾರು 30 ಸಾವಿರ ಡಾಲರ್ ನಿಂದ 50 ಸಾವಿರ ಡಾಲರ್ ವರೆಗೆ ಸಂಬಳ ಸಿಗಲಿದೆ.

ಅಂಪೈರ್ ಆಗಲು ಕ್ರಿಕೆಟ್ ನ 40 ನಿಯಮಗಳನ್ನು ತಿಳಿದಿರಬೇಕು. ಕ್ರಿಕೆಟ್ ಬಗ್ಗೆ ಹೆಚ್ಚಿನ ಮಾಹಿತಿಯಿರಬೇಕು. ಇದ್ರ ಜೊತೆಗೆ ಅಂಪೈರ್ ನಡವಳಿಕೆ ಕೂಡ ಮಹತ್ವದ ಪಾತ್ರ ವಹಿಸುತ್ತದೆ.

ರಾಜ್ಯ ಮಟ್ಟದ ಕ್ರೀಡಾ ಕೇಂದ್ರಗಳಲ್ಲಿ ಕಾಲ ಕಾಲಕ್ಕೆ ಅಂಪೈರ್ ಪರೀಕ್ಷೆಗಳು ನಡೆಯುತ್ತವೆ. ಆ ಪರೀಕ್ಷೆಯಲ್ಲಿ ಪಾಸ್ ಆದ ಅಭ್ಯರ್ಥಿ ಬಿಸಿಸಿಐ ಏರ್ಪಡಿಸುವ ಪರೀಕ್ಷೆಗೆ ಕುಳಿತುಕೊಳ್ಳಲು ಅರ್ಹತೆ ಪಡೆಯುತ್ತಾನೆ. ಪರೀಕ್ಷೆಯಲ್ಲಿ ಪಾಸ್ ಆದ್ರೆ ಬಿಸಿಸಿಐ ಅಂಪೈರ್ ಹುದ್ದೆ ನೀಡುತ್ತದೆ. ಕೆಲ ರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಮಾಡಿದ ನಂತ್ರ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಮಾಡಲು ಅವಕಾಶ ನೀಡುತ್ತದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...