alex Certify
ಕನ್ನಡ ದುನಿಯಾ       Mobile App
       

Kannada Duniya

ಐಸಿಸಿ ಕ್ರಿಕೆಟ್ ಕಮಿಟಿಗೆ ರಾಹುಲ್ ದ್ರಾವಿಡ್

rahul dravidಟೀಮ್ ಇಂಡಿಯಾ ಕೋಚ್ ಆಗುವರೆಂದು ಹೇಳಲಾಗುತ್ತಿದ್ದ ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಿಗೆ ಅದಕ್ಕೂ ಮೊದಲೇ ಮತ್ತೊಂದು ಮಹತ್ವದ ಸ್ಥಾನ ದೊರೆತಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಕ್ರಿಕೆಟ್ ಸಮಿತಿಗೆ ಸದಸ್ಯರಾಗಿ ರಾಹುಲ್ ದ್ರಾವಿಡ್ ನೇಮಕಗೊಂಡಿದ್ದಾರೆ.

ಅನಿಲ್ ಕುಂಬ್ಳೆ ನೇತೃತ್ವದ ಈ ಸಮಿತಿಗೆ ರಾಹುಲ್ ದ್ರಾವಿಡ್ ಅವರ ಜೊತೆ ಶ್ರೀಲಂಕಾದ ಮಹೇಲಾ ಜಯವರ್ಧನೆಯವರನ್ನೂ ನೇಮಕ ಮಾಡಲಾಗಿದೆ. ಜೊತೆಗೆ ಅವಧಿ ಅಂತ್ಯಗೊಂಡಿದ್ದ ಅನಿಲ್ ಕುಂಬ್ಳೆಯವರನ್ನೇ ಮತ್ತೇ ಮೂರು ವರ್ಷಗಳ ಕಾಲ ಮುಂದುವರೆಸಲಾಗಿದೆ. 2018 ರ ವರೆಗೂ ಕುಂಬ್ಳೆ ಈ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ.

ಮಾಧ್ಯಮ, ಅಂಪೈರ್, ಕ್ರಿಕೆಟ್ ಆಟಗಾರರು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪರಿಣಿತರಾದವರನ್ನು ಒಳಗೊಂಡಿರುವ ಈ ಸಮಿತಿ, ಕ್ರಿಕೆಟ್ ನ್ನು ಉನ್ನತ ಹಂತಕ್ಕೇರಿಸಲು ಸಲಹೆ- ಸೂಚನೆಗಳನ್ನು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕಾರ್ಯಕಾರಿ ಸಮಿತಿಗೆ ನೀಡಲಿದೆ. ಸಮಿತಿಯ ಶಿಫಾರಸ್ಸುಗಳನ್ನು ಪರಿಶೀಲಿಸಿ ಐಸಿಸಿ ಇದನ್ನು ಅಳವಡಿಸಿಕೊಳ್ಳಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...