alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಪರಾಭವವನ್ನು ಟಿವಿ ಸೆಟ್ ಮೇಲೆ ಹೇಗೆ ತೀರಿಸಿಕೊಂಡಿದ್ದಾರೆ ನೋಡಿ

Angry-Pak-Fans-new

ಏಷ್ಯಾ ಕಪ್ 2016 ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ತನ್ನ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ದ 5 ವಿಕೆಟ್ ಗಳ ಹೀನಾಯ ಸೋಲನ್ನನುಭವಿಸಿತ್ತು. ಫೈನಲ್ ಪಂದ್ಯಕ್ಕಿಂತ ರೋಚಕವಾಗಿದ್ದ ಈ ಪಂದ್ಯದಲ್ಲಿ ಭಾರತದ ವಿರುದ್ದ ಪಾಕ್ ಸೋತಿರುವುದಕ್ಕೆ ಪಾಕ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಕೇವಲ 83 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿದ್ದ ಭಾರತ ತಂಡ 15.3 ಓವರ್ ಗಳಲ್ಲಿ ಜಯ ಸಾಧಿಸಿತ್ತು. ವಿರಾಟ್ ಕೊಹ್ಲಿ ಆಕರ್ಷಕ 49 ರನ್ ಗಳಿಸಿದ್ದರು. ಭಾರತದ ಗೆಲುವಿನ ನಂತರ ಭಾರತದಲ್ಲಿ ಸಂಭ್ರಮ ಮನೆ ಮಾಡಿದ್ದರೆ, ಪಾಕಿಸ್ತಾನದಲ್ಲಿ ತನ್ನ ಆಟಗಾರರ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು.

ಪಾಕ್ ಕ್ರಿಕೆಟ್ ಅಭಿಮಾನಿಗಳು ತಮ್ಮ ತಂಡದ ಸೋಲನ್ನು ಸಹಿಸಲಾರದೆ ಟಿವಿ ಸೆಟ್ ಗಳನ್ನು ಒಡೆದು ಹಾಕಿದ್ದರಲ್ಲದೇ ಬ್ಯಾಟ್ ಹಾಗೂ ವಿಕೆಟ್ ಗಳಿಗೆ ಬೆಂಕಿ ಹಚ್ಚಿದ್ದರು. ಅದರ ವಿಡಿಯೋಗಳು ಈಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು, ಪಾಕಿಸ್ತಾನದ ಅಭಿಮಾನಿಗಳ ಆಕ್ರೋಶ ಯಾವ ರೀತಿ ಇತ್ತು ಎಂಬುದು ವ್ಯಕ್ತವಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...