alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶಕ್ಕೆ ಪದಕ ತಂದವನ ಕೈನಲ್ಲಿ ಭಿಕ್ಷೆ ಪಾತ್ರೆ…!

ಏಷ್ಯನ್ ಗೇಮ್ಸ್ ನಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ಆಟಗಾರರಿಗೆ ಸನ್ಮಾನಗಳು ನಡೆಯುತ್ತಿವೆ. ತಮ್ಮ ರಾಜ್ಯದ ಆಟಗಾರರಿಗೆ ರಾಜ್ಯ ಸರ್ಕಾರಗಳು ಲಕ್ಷ, ಕೋಟಿ ರೂಪದಲ್ಲಿ ಹಣ ನೀಡಿ ಗೌರವ ಸಲ್ಲಿಸುತ್ತಿದೆ. ಈ ಮಧ್ಯೆ ವಿಕಲಾಂಗ ಆಟಗರಾರನೊಬ್ಬನ ನೋವಿನ ಕಥೆ ಎಲ್ಲರ ಕಣ್ಣಲ್ಲಿ ನೀರು ತರಿಸುತ್ತಿದೆ.

ಮಧ್ಯಪ್ರದೇಶದ ವಿಕಲಾಂಗ ಆಟಗಾರ ಮನಮೋಹನ್ ಸಿಂಗ್ ಲೋಧಾ ಕುಟುಂಬ ನಿರ್ವಹಣೆಗಾಗಿ ಭಿಕ್ಷೆ ಬೇಡ್ತಿದ್ದಾರೆ. 2017 ರಲ್ಲಿ ನಡೆದ ಪ್ಯಾರಾ ಒಲಂಪಿಕ್ ನಲ್ಲಿ ಪಾಲ್ಗೊಂಡಿದ್ದ ಲೋಧಾ 100 ಕಿಲೋಮೀಟರ್ ಓಟದಲ್ಲಿ ಬೆಳ್ಳಿ ಪದಕ ತಂದಿದ್ದರು. ದಿವ್ಯಾಂಗ ಲೋಧಾ ಉದ್ಯೋಗಕ್ಕಾಗಿ ಸಿಎಂಗೆ ಕೂಡ ಪತ್ರ ಬರೆದಿದ್ದಾರೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ.

ಸರ್ಕಾರದಿಂದ ಯಾವುದೇ ನೆರವು ಸಿಗದ ಕಾರಣ ಲೋಧಾ, ಭೋಪಾಲ್ ನಲ್ಲಿ ಭಿಕ್ಷೆ ಬೇಡುತ್ತಿದ್ದಾರೆ. ಕುಟುಂಬದಲ್ಲಿರುವ ಒಂದೇ ಒಂದು ಭರವಸೆ ಲೋಧಾರಂತೆ. ಹಾಗಾಗಿ ಸರ್ಕಾರ ಉದ್ಯೋಗ ನೀಡಬೇಕೆಂದು ಲೋಧಾ ವಾದ. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಇದಕ್ಕೆ ನಾವು ಹೊಣೆಯಲ್ಲ ಎಂಬ ಉತ್ತರಗಳು ಅಧಿಕಾರಿಗಳಿಂದ ಬರ್ತಿದೆ. ಎಲ್ಲರ ನಿರ್ಲಕ್ಷ್ಯಕ್ಕೆ ಉತ್ತಮ ಆಟಗಾರನೊಬ್ಬ ಭಿಕ್ಷೆ ಬೇಡುವಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...