alex Certify
ಕನ್ನಡ ದುನಿಯಾ       Mobile App
       

Kannada Duniya

ದಿನೇಶ್ ಕಾರ್ತಿಕ್ ಕೊನೆ ಹೊಡೆತವನ್ನು ನೋಡ್ಲಿಲ್ವಂತೆ ರೋಹಿತ್…!

ದಿನೇಶ್ ಕಾರ್ತಿಕ್ ಕೊಲಂಬೋದ ಆರ್.ಪ್ರೇಮದಾಸ್ ಕ್ರೀಡಾಂಗಣದಲ್ಲಿ ಅಸಾಧ್ಯವಾದದ್ದನ್ನು ಸಾಧ್ಯ ಮಾಡಿ ತೋರಿಸಿದ್ದಾರೆ. ಕೊನೆಯ ಬಾಲಿಗೆ ಸಿಕ್ಸ್ ಸಿಡಿಸಿ ಟೀಂ ಇಂಡಿಯಾ ಗೆಲುವಿಗೆ ಕಾರಣವಾಗಿದ್ದಾರೆ. ದಿನೇಶ್ ಕಾರ್ತಿಕ್ ಕೊನೆ ಹೊಡೆತವನ್ನು ನೋಡದ ಅನೇಕ ಕ್ರಿಕೆಟ್ ಅಭಿಮಾನಿಗಳು ಬೇಸರ ಪಟ್ಟುಕೊಳ್ತಿದ್ದಾರೆ. ಆದ್ರೆ ಸ್ವತಃ ನಾಯಕ ರೋಹಿತ್ ಶರ್ಮಾ ಕೂಡ ಕೊನೆ ಹೊಡೆತವನ್ನು ನೋಡಿಲ್ಲ ಎಂಬುದು ನಿಮಗೆ ಗೊತ್ತಾ?

ರೋಹಿತ್ ಶರ್ಮಾ ಪಂದ್ಯ ಟೈ ಆಗಲಿದೆ ಎಂಬ ನಿರೀಕ್ಷೆಯಲ್ಲಿದ್ದರಂತೆ. ಪಂದ್ಯ ಟೈ ಆದಲ್ಲಿ ಸೂಪರ್ ಓವರ್ ಆಡಬೇಕಾಗುತ್ತದೆ ಎಂದುಕೊಂಡ ರೋಹಿತ್ ಪ್ಯಾಡ್ ಕಟ್ಟಲು ಡ್ರೆಸ್ಸಿಂಗ್ ರೂಮಿಗೆ ಹೋಗಿದ್ದರಂತೆ. ಪಂದ್ಯದ ನಂತ್ರ ರೋಹಿತ್ ಶರ್ಮಾ ಈ ವಿಷ್ಯವನ್ನು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ, ಪಂದ್ಯ ಟೈ ಆಗುತ್ತೆ ಎಂದುಕೊಂಡಿದ್ದೆ. ಹಾಗಾಗಿ ಪ್ಯಾಡ್ ಕಟ್ಟಲು ಡ್ರೆಸ್ಸಿಂಗ್ ರೂಮಿಗೆ ಹೋದೆ. ದಿನೇಶ್ ಕಾರ್ತಿಕ್ ಕೊನೆ ಹೊಡೆತ ಇದ್ರಿಂದ ಮಿಸ್ ಆಯ್ತು ಎಂದಿದ್ದಾರೆ. ಕೊನೆ ಚೆಂಡಿಗೆ 5 ರನ್ ಗಳಿಸೋದು ಸವಾಲಿನ ಕೆಲಸವಾಗಿತ್ತು. ಬಹುತೇಕರು ಕೈಚೆಲ್ಲಿ ಕುಳಿತಿದ್ದರು. ಆದ್ರೆ ದಿನೇಶ್ ಕಾರ್ತಿಕ್ ಟೀಂ ಇಂಡಿಯಾ ಟ್ರೋಫಿ ಹಿಡಿಯುವಂತೆ ಮಾಡಿದ್ರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...