alex Certify
ಕನ್ನಡ ದುನಿಯಾ       Mobile App
       

Kannada Duniya

ಟೆಸ್ಟ್ ತಂಡಕ್ಕೆ ಮರಳಿದ ದಿನೇಶ್ ಕಾರ್ತಿಕ್

ಹೆಬ್ಬೆರಳು ಗಾಯದಿಂದ ಬಳಲುತ್ತಿರುವ ಟೀಂ ಇಂಡಿಯಾ ಟೆಸ್ಟ್ ತಂಡದ ಕೀಪರ್ ಹಾಗೂ ಬ್ಯಾಟ್ಸ್ ಮೆನ್ ವೃದ್ಧಿಮಾನ್ ಸಾಹಾ ಜೂನ್ 14ರಂದು ಬೆಂಗಳೂರಿನಲ್ಲಿ ನಡೆಯುವ ಏಕೈಕ ಟೆಸ್ಟ್ ಪಂದ್ಯದಿಂದ ಹೊರ ಬಿದ್ದಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಈ ಬಗ್ಗೆ ಶನಿವಾರ ಅಧಿಕೃತ ಹೇಳಿಕೆ ನೀಡಿದ್ದಾರೆ.

ವೃದ್ಧಿಮಾನ್ ಸಾಹಾ ಹೆಬ್ಬರಳಿಗೆ ಗಾಯವಾಗಿದ್ದು, ಅವ್ರು ಅಪ್ಘಾನಿಸ್ತಾನದ ವಿರುದ್ಧ ನಡೆಯುವ ಟೆಸ್ಟ್ ಪಂದ್ಯಕ್ಕೆ ಗೈರಾಗಲಿದ್ದಾರೆ. ವೃದ್ಧಿಮಾನ್ ಸಾಹಾ ಬದಲು ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಏಕೈಕ ಟೆಸ್ಟ್ ಪಂದ್ಯದ ವಿಕೆಟ್ ಕೀಪರ್ ಆಗಿ ದಿನೇಶ್ ಕಾರ್ತಿಕ್ ಅವ್ರನ್ನು ಆಯ್ಕೆ ಮಾಡಲಾಗಿದೆ ಎಂದು ಅಮಿತಾಭ್ ಚೌಧರಿ ಹೇಳಿದ್ದಾರೆ.

ಐಪಿಎಲ್ ನಲ್ಲಿ ಸನ್ ರೈಸಸ್ ಹೈದ್ರಾಬಾದ್ ಪರ ಆಟವಾಡಿದ್ದ ಸಾಹಾ ಕೊಲ್ಕತ್ತಾ ವಿರುದ್ಧ ನಡೆದ ಅರ್ಹತಾ ಪಂದ್ಯದಲ್ಲಿ ಗಾಯಗೊಂಡಿದ್ದಾರೆ. ಅಧಿಕೃತ ಟ್ವೀಟರ್ ನಲ್ಲಿಯೂ ಸಾಹಾ ಟೆಸ್ಟ್ ತಂಡದಿಂದ ಹೊರಗಿದ್ದು, ದಿನೇಶ್ ಸ್ಥಾನ ಪಡೆದಿದ್ದಾರೆಂದು ಬಿಸಿಸಿಐ ಹೇಳಿದೆ. ಅನೇಕ ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗಿದ್ದ ದಿನೇಶ್ ಕಾರ್ತಿಕ್ ಮತ್ತೆ ತಂಡಕ್ಕೆ ಮರಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...