alex Certify
ಕನ್ನಡ ದುನಿಯಾ       Mobile App
       

Kannada Duniya

ನಿವೃತ್ತಿ ಘೋಷಿಸಿದ ಖ್ಯಾತ ಕ್ರಿಕೆಟರ್

dilshan_getty

ಶ್ರೀಲಂಕಾ ಕ್ರಿಕೆಟ್ ತಂಡದ ಭರವಸೆಯ ಆಟಗಾರ ತಿಲಕರತ್ನೆ ದಿಲ್ಶಾನ್, ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಲಿದ್ದಾರೆ. ಭಾನುವಾರ ಆಸ್ಟ್ರೇಲಿಯಾ ವಿರುದ್ಧ ನಡೆಯುವ ಪಂದ್ಯ ಅವರ ಕೊನೆಯ ಏಕದಿನ ಪಂದ್ಯವಾಗಲಿದೆ.

2013 ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದ ತಿಲಕರತ್ನೆ ದಿಲ್ಶಾನ್, ಸದ್ಯ ಟಿ-20 ಮತ್ತು ಏಕದಿನ ಪಂದ್ಯಗಳನ್ನಾಡುತ್ತಿದ್ದಾರೆ. ಆಗಸ್ಟ್ 28 ರಂದು ಡಂಬುಲಾದಲ್ಲಿ ನಡೆಯಲಿರುವ ಆಸೀಸ್ ವಿರುದ್ಧದ 3 ನೇ ಏಕದಿನ ಪಂದ್ಯವನ್ನು ಅವರು ದೇಶಕ್ಕೆ ಸಮರ್ಪಿಸಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೇಳಿದೆ. 39 ವರ್ಷದ ದಿಲ್ಶಾನ್ 87 ಟೆಸ್ಟ್ ಪಂದ್ಯಗಳಿಂದ 5492 ರನ್ ಗಳಿಸಿದ್ದು, 39 ವಿಕೆಟ್ ಪಡೆದಿದ್ದಾರೆ.

ಅದೇ ರೀತಿ ಏಕದಿನ ಪಂದ್ಯದಲ್ಲಿ ಅವರು 229 ಪಂದ್ಯಗಳನ್ನಾಡಿದ್ದು, 10,248 ರನ್ ಗಳಿಸಿದ್ದಾರೆ. 106 ವಿಕೆಟ್ ಗಳಿಸುವ ಮೂಲಕ, ಬೌಲಿಂಗ್ ನಲ್ಲಿಯೂ ಮಿಂಚಿದ್ದಾರೆ. ಶ್ರೀಲಂಕಾ ಕ್ರಿಕೆಟ್ ನ ಭರವಸೆಯ ಆಟಗಾರನಾಗಿರುವ ದಿಲ್ಶಾನ್, ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದಾರೆ. ಸೆಪ್ಟಂಬರ್ ನಲ್ಲಿ ನಡೆಯುವ 2 ಟಿ-20 ಪಂದ್ಯಗಳ ನಂತರ ಟಿ-20 ಪಂದ್ಯಗಳಿಂದಲೂ ನಿವೃತ್ತಿ ಹೊಂದಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...