alex Certify
ಕನ್ನಡ ದುನಿಯಾ       Mobile App
       

Kannada Duniya

42ನೇ ವಯಸ್ಸಿನಲ್ಲಿ ರನ್ನಿಂಗ್ ಶುರುಮಾಡಿ ಕನಸು ನನಸು ಮಾಡಿದ ಮಹಿಳೆ

ಮುಂಬೈನಲ್ಲಿ ವಾಸವಾಗಿರುವ ಡಿಸ್ನಿ ಡಿಸೋಜಾ ಸಾಧಿಸಿ ತೋರಿಸಿದ್ದಾರೆ. ವಯಸ್ಸಿಗೂ ಸಾಧನೆಗೂ ಸಂಬಂಧವಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. 16ನೇ ವಯಸ್ಸಿನವರೆಗೆ ಓಟದ ಸ್ಪರ್ಧೆಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಗೆದ್ದಿದ್ದ ಡಿಸ್ನಿ ಡಿಸೋಜಾ ಒಂದೂ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಪಾಲ್ಗೊಂಡಿರಲಿಲ್ಲ. ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಡಿಸೋಜಾ ಕನಸಾಗಿತ್ತು. ಇದನ್ನು ಡಿಸೋಜಾ ತಮ್ಮ 42ನೇ ವಯಸ್ಸಿನಲ್ಲಿ ನನಸು ಮಾಡಿದ್ದಾರೆ.

16ನೇ ವಯಸ್ಸಿನ ನಂತ್ರ ಓಟದಿಂದ ಹಿಂದೆ ಸರಿದಿದ್ದ ಡಿಸೋಜಾಗೆ ಮದುವೆಯಾಯ್ತು. ನಂತ್ರ ಎಲ್ ಐ ಸಿ ಯಲ್ಲಿ ಕೆಲಸ ಮಾಡ್ತಿದ್ದರು. 42ನೇ ವಯಸ್ಸಿನಲ್ಲಿ ಮತ್ತೆ ವೃತ್ತಿಗೆ ವಾಪಸ್ ಆಗುವ ನಿರ್ಧಾರಕ್ಕೆ ಬಂದರು. ಚೀನಾ ಮಾಸ್ಟರ್ಸ್ ಗೆ ಅರ್ಹತೆ ಪಡೆದ ನಂತ್ರ ಅವರು ವಾಪಸ್ ಟ್ರ್ಯಾಕ್ ಗೆ ಬಂದ್ರು. 19 ದೇಶಗಳ 35 ಸ್ಪರ್ಧಿಗಳು ಇದ್ರಲ್ಲಿ ಪಾಲ್ಗೊಂಡಿದ್ದರು.

42ನೇ ವಯಸ್ಸಿನಲ್ಲಿ ಮತ್ತೆ ತರಬೇತಿ ಶುರುಮಾಡಿದ ಮಹಿಳೆ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯ್ತು. ಆದ್ರೂ ಛಲ ಬಿಡದ ಮಹಿಳೆ  ಸ್ಪರ್ಧೆಯಲ್ಲಿ ಪಾಲ್ಗೊಂಡು ಭಾರತಕ್ಕೆ ಕಂಚು ಹಾಗೂ ಬೆಳ್ಳಿ ಪದಕ ತಂದುಕೊಡುವ ಮೂಲಕ ತಮ್ಮ ಕನಸನ್ನು ನನಸು ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...