alex Certify
ಕನ್ನಡ ದುನಿಯಾ       Mobile App
       

Kannada Duniya

ಪಂದ್ಯ ವೀಕ್ಷಿಸುವಾಗಲೇ ಕುಸಿದು ಬಿದ್ರಾ ಮರಡೋನಾ…?

ಅರ್ಜೆಂಟೈನಾದ ಮಾಜಿ ಫುಟ್ಬಾಲ್ ಆಟಗಾರ ಲಿವಿಂಗ್ ಲೆಜೆಂಡ್ ಡಿಯಾಗೋ ಮರಡೋನಾ ವಿಚಿತ್ರ ಸನ್ನಿವೇಶದ ಮೂಲಕ ಆತಂಕವನ್ನ ಸೃಷ್ಟಿಸಿಬಿಟ್ಟಿದ್ದಾರೆ. ಅರ್ಜೆಂಟೈನಾ ಮತ್ತು ನೈಜೀರಿಯಾ ನಡುವಿನ ಪಂದ್ಯದಲ್ಲಿ ಮರಡೋನಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಮೈದಾನದಿಂದ ಹೊರನಡೆದಿದ್ದಾರೆ.

ಸ್ಟೇಡಿಯಂನ ಲಕ್ಷುರಿ ಬಾಕ್ಸ್ ನಲ್ಲಿ ಕುಳಿತು ಪಂದ್ಯವನ್ನ ವೀಕ್ಷಣೆ ಮಾಡುತ್ತಿದ್ದ ಮರಡೋನಾ ಒಂದು ಕ್ಷಣದಲ್ಲಿ ಮುಚ್ಚಿದ ಕಣ್ಣುಗಳಿಂದ ಹಿಂದಕ್ಕೆ ಬೀಳುವ ಸ್ಥಿತಿಯನ್ನ ತಲುಪಿಬಿಟ್ಟಿದ್ರು

ಮರಡೋನಾ ಅವರ ಪರಿಸ್ಥಿತಿಯನ್ನ ಕಂಡು ಕೂಡಲೇ ವೈದ್ಯಕೀಯ ಸಿಬ್ಬಂದಿ ನೆರವಿಗೆ ಧಾವಿಸಿದ್ರು. ಕೂಡಲೇ ಅವರನ್ನ ಸಿಬ್ಬಂದಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಮರಡೋನಾ ಪಂದ್ಯದಲ್ಲಿ ಭಾವೋದ್ವೇಗಕ್ಕೊಳಗಾಗಿದ್ದರು ಅನ್ನೋದಕ್ಕೆ ಆ ಫೋಟೋವೇ ಸಾಕ್ಷಿ.

ಒಂದು ಗಂಟೆಯ ನಂತರದಲ್ಲಿ ಮರಡೋನಾ ಏರ್ಪೋರ್ಟ್ನಲ್ಲಿ ಖುಷಿಯಾಗಿರುವ ಫೋಟೋವನ್ನ ನೋಡಿದ ಬಳಿಕಷ್ಟೇ ಮರಡೋನಾ ಅಭಿಮಾನಿಗಳು ನಿಟ್ಟುಸಿರುಬಿಟ್ಟರು. ಇತ್ತೀಚೆಗಷ್ಟೇ ಮೈದಾನದಲ್ಲೇ ಸಿಗಾರ್ ಸೇದಿ ಮರಡೋನಾ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...