alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ ತಮ್ಮ ಬೈಕ್ ಗಳನ್ನು ಇಟ್ಟಿರುವುದೆಲ್ಲಿ ಗೊತ್ತಾ…?

ಮಹೇಂದ್ರ ಸಿಂಗ್ ಧೋನಿಗೆ ಬೈಕ್ ಕ್ರೇಜ್ ಹೆಚ್ಚು. ಈ ಬಗ್ಗೆ ನಿಮಗೂ ಸಹ ಗೊತ್ತಿರುತ್ತೆ. ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಬಿಡುವಿನ ವೇಳೆಯಲ್ಲಿ ಬೈಕ್ ರೈಡ್ ಮಾಡಿ ಎಲ್ಲರ ಗಮನ ಸೆಳೆಯುತ್ತಾರೆ.

ಧೋನಿ ಬೈಕ್ ಪ್ರೀತಿ ಬಗ್ಗೆ ಎಲ್ಲರೂ ನೋಡಿದ್ದೇವೆ. ಪಂದ್ಯದ ವೇಳೆ ಟೀಮ್ ಇಂಡಿಯಾದ ಯಾವುದೇ ಆಟಗಾರರಿಗೆ ಬೈಕ್ ಸಿಕ್ಕರೂ ಅದರ ಮೇಲೆ ಮೊದಲ ರೈಡ್ ಮಾಡೋದು ಮಾಹಿ. ತಮ್ಮ ಬಳಿ ಇರುವ ಬೈಕ್ ಗಳನ್ನು ಅಚ್ಚುಕಟ್ಟಾಗಿ ಇಟ್ಟುಕೊಂಡಿರುವ ಧೋನಿ, ಆಗೊಮ್ಮೆ ಈಗೊಮ್ಮೆ ಸಾಮಾಜಿಕ ತಾಣಗಳಲ್ಲಿ ಅವುಗಳ ಚಿತ್ರಗಳನ್ನು ಹಾಕೋದನ್ನು ನೋಡಿದ್ದೇವೆ.

ಮಾಹಿ ಅರ್ಧಾಂಗಿ ಸಾಕ್ಷಿ, ಧೋನಿ ಬೈಕ್ ಪ್ರೀತಿಯ ಬಗ್ಗೆ ಸಾಮಾಜಿಕ ತಾಣದಲ್ಲಿ ಫೋಟೋ ಒಂದನ್ನು ಅಪ್ ಲೋಡ್ ಮಾಡಿದ್ದಾರೆ. ಪೋಟೋದಲ್ಲಿ ಈ ಹುಡುಗ ತನ್ನ ಆಟಿಕೆಗಳನ್ನು ತುಂಬಾ ಇಷ್ಟ ಪಡುತ್ತಾನೆ ಎಂದು ಬರೆದಿದ್ದಾರೆ.

ಧೋನಿಯ ಬಳಿ ದುಬಾರಿ ಬೆಲೆಯ ಬೈಕ್ ಇವೆ. ಅವುಗಳ ಮೇಲೆ ಸವಾರಿ ಮಾಡಿ ಧೋನಿ, ಅವುಗಳನ್ನು ಜತನದಿಂದ ಕಾಪಾಡುತ್ತಾರೆ. ದ್ವಿಚಕ್ರವಾಹನದ ವಸ್ತು ಸಂಗ್ರಹಾಲಯದ ರೀತಿ ಕೂಲ್ ಕ್ಯಾಪ್ಟನ್ ತಮ್ಮ ಬೈಕ್ ಗಳನ್ನು ಜೋಪಾನ ಮಾಡ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...