alex Certify
ಕನ್ನಡ ದುನಿಯಾ       Mobile App
       

Kannada Duniya

ಪಟಾಕಿ ಸಿಡಿಸುತ್ತಿದ್ದ ಅಭಿಮಾನಿಗಳಿಗೆ ಧೋನಿ ಪತ್ನಿ ಹೇಳಿದ್ದೇನು..?

zivafans

ವಿಶ್ವ ಕಪ್ ಫೈನಲ್ ಗಿಂತ ರೋಚಕವಾಗಿರುವ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದಲ್ಲಿ ಭಾರತ, ಆರು ವಿಕೆಟ್ ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ವಿಶ್ವ ಕಪ್ ನಲ್ಲಿ ಪಾಕಿಸ್ತಾನದ ವಿರುದ್ದ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ.

ಪಾಕಿಸ್ತಾನದ ಹೀನಾಯ ಸೋಲಿನಿಂದ ಹತಾಶೆಗೊಂಡ ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳು ತಮ್ಮ ಟಿವಿ ಸೆಟ್ ಗಳನ್ನು ಒಡೆದು ಹಾಕಿ, ಬ್ಯಾಟ್ ಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ತೀರಿಸಿಕೊಂಡಿದ್ದರೆ, ಇತ್ತ ಭಾರತದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ತಮ್ಮ ಸಂಭ್ರಮವನ್ನು ಆಚರಿಸಿದ್ದಾರೆ.

ಈ ರೀತಿ ತಮ್ಮ ಮನೆ ಮುಂದೆ ಪಟಾಕಿ ಸಿಡಿಸಿ ಸಂಭ್ರಮವನ್ನು ಆಚರಿಸುತ್ತಿದ್ದ ಅಭಿಮಾನಿಗಳಿಗೆ, ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಪತ್ನಿ ಸಾಕ್ಷಿ, ಗಲಾಟೆ ಮಾಡಬೇಡಿ. ಪಟಾಕಿ ಸದ್ದಿಗೆ ಮಗಳು ಝೀವಾ ಎಚ್ಚರಗೊಳ್ಳುತ್ತಾಳೆ ಎಂದಿದ್ದಾರೆ. ಜೊತೆಗೆ ಸದ್ಯ ಮಗಳದ್ದು ತನ್ನ ತಂದೆಯ ಸಾಧನೆಯನ್ನು ಅರ್ಥೈಸಿಕೊಳ್ಳುವ ವಯಸ್ಸಲ್ಲ. ಮುಂದೊಂದು ದಿನ ಅವಳು ಇದನ್ನು ಎಂಜಾಯ್ ಮಾಡುತ್ತಾಳೆ ಎಂದು ಟ್ವೀಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...