alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ ನೋಡಲು ಆಸೀಸ್ ನಿಂದ ಬಂದ ಅಭಿಮಾನಿ

dhoni-fan

2008 ರಲ್ಲಿ ಎಂ.ಎಸ್. ಧೋನಿ ಅಡಿಲೇಡ್ ಓವಲ್ ನಲ್ಲಿ ಆಗಷ್ಟೆ ಅಭ್ಯಾಸ ಮುಗಿಸಿ ಬಂದಿದ್ರು. 16 ರ ಹುಡುಗಿಯೊಬ್ಳು ನಿಮ್ಮ ಹೆಸರೇನು ಅಂತಾ ಧೋನಿಯನ್ನೇ ಕೇಳಿದ್ಲು, ಆಕೆ ಜೀವನದಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಮೈದಾನಕ್ಕೆ ಬಂದಿದ್ದ ಲೀನ್ನೆ ಮರ್ರಿ. ಅದಾದ್ಮೇಲೆ ಪ್ರತಿ ದಿನ ಧೋನಿಯನ್ನು ನೋಡಲು ಕ್ರಿಕೆಟ್ ಗ್ರೌಂಡ್ ಗೆ ಬರಲಾರಂಭಿಸಿದ್ಲು.

ಹೀಗೆ ಧೋನಿಯ ದೊಡ್ಡ ಅಭಿಮಾನಿಯಾಗಿ ಬದಲಾದ ಲೀನ್ನೆ, ಕೂಲ್ ಕ್ಯಾಪ್ಟನ್ ಆಟ ನೋಡಲು ದೂರದ ಆಸ್ಟ್ರೇಲಿಯಾದಿಂದ ದೆಹಲಿಗೆ ಬಂದಿದ್ದಾಳೆ. ಈವರೆಗೆ 100ಕ್ಕೂ ಹೆಚ್ಚು ಬಾರಿ ಆಕೆ ಧೋನಿಯನ್ನು ಭೇಟಿಯಾಗಿದ್ದಾಳೆ. ದಿಢೀರನೆ ದೆಹಲಿಯಲ್ಲಿ ಪ್ರತ್ಯಕ್ಷವಾದ ಲೀನ್ನೆಯನ್ನು ನೋಡಿ ಧೋನಿಗೂ ಅಚ್ಚರಿ. ಲೀನ್ನೆಗೆ ಮೊದಲ ಬಾರಿ ಧೋನಿಯನ್ನು ಭೇಟಿಯಾದಾಗ ಇದ್ದಂಥದ್ದೇ ಎಕ್ಸೈಟ್ಮೆಂಟ್.

ಹೇಗಾದ್ರೂ ಮಾಡಿ ಭಾರತ-ಕಿವೀಸ್ ನಡುವಣ ಪಂದ್ಯದ ಟಿಕೆಟ್ ಕೊಡಿಸುವಂತೆ ಲೀನ್ನೆ, ಧೋನಿಗೆ ಮನವಿ ಮಾಡಿದ್ದಾಳೆ, ಧೋನಿ ಕೂಡ ಕೊಡಲು ಒಪ್ಪಿದ್ದಾರಂತೆ. ಕ್ರಿಕೆಟ್ ಆಸ್ಟ್ರೇಲಿಯಾದ ರಾಷ್ಟ್ರೀಯ ಕ್ರೀಡೆಯಾಗಿದ್ರೂ ಅದರ ಬಗ್ಗೆ ಲೀನ್ನೆಗೆ ಅರಿವಿರಲಿಲ್ಲ, ಆದ್ರೀಗ ಲೀನ್ನೆ ಟೀಂ ಇಂಡಿಯಾದ ಬಿಗ್ ಫ್ಯಾನ್, ಆಸೀಸ್ ವಿರುದ್ಧದ ಮ್ಯಾಚ್ ನಲ್ಲೂ ಅವಳು ಸಪೋರ್ಟ್ ಮಾಡೋದು ಭಾರತ ತಂಡಕ್ಕೆ. ವಿಶೇಷ ಅಂದ್ರೆ ಲೀನ್ನೆ, ‘ಎಂ.ಎಸ್.ಧೋನಿ ದಿ ಅನ್ ಟೋಲ್ಡ್ ಸ್ಟೋರಿ’ ಚಿತ್ರವನ್ನು ಮೊದಲ ದಿನ ಮೊದಲ ಶೋನಲ್ಲೇ ವೀಕ್ಷಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...