alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗಿಂತ ಮೊದಲು ಧೋನಿ ಪತ್ನಿ ಏನು ಮಾಡ್ತಿದ್ದರು ಗೊತ್ತಾ?

254957564sakshi-ll

ಸೆಲೆಬ್ರಿಟಿಗಳೆಂದ ಮೇಲೆ ಪಾರ್ಟಿ, ಮಸ್ತಿ ಇರಲೇಬೇಕು. ಅವರ ಸುದ್ದಿಗಳು ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲೇಬೇಕು. ಈಗ ಕೂಲ್ ಕ್ಯಾಪ್ಟನ್ ಧೋನಿ ಪತ್ನಿ ಸಾಕ್ಷಿಯ ಕೆಲ ಫೋಟೋಗಳು ಸಾಕಷ್ಟು ಸುದ್ದಿ ಮಾಡ್ತಾ ಇವೆ. ಸಾಕ್ಷಿ ತಪ್ಪು ಮಾಡಿ ಸಿಕ್ಕಿಬಿದ್ದಿಲ್ಲ. ಬದಲಾಗಿ ಅವರ ಪಾರ್ಟಿ ಪ್ರೀತಿ ಫೋಟೋದಲ್ಲಿ ವೈರಲ್ ಆಗಿದೆ.

ಸಾಕ್ಷಿ ಮದುವೆಗಿಂತ ಮೊದಲು ಸಿಕ್ಕಾಪಟ್ಟೆ ಮೋಜು ಮಸ್ತಿ ಮಾಡ್ತಿದ್ದರಂತೆ. ಸ್ನೇಹಿತರ ಜೊತೆ ಪಬ್ ಗೆ ಹೋಗಿ ಎಂಜಾಯ್ ಮಾಡ್ತಿದ್ದ ಸಾಕ್ಷಿ, ಧೂಮಪಾನ ಕೂಡ ಮಾಡ್ತಿದ್ದರು. ಸ್ನೇಹಿತರ ಜೊತೆ ಎಂಜಾಯ್ ಮಾಡ್ತಿದ್ದ ಸಾಕ್ಷಿ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಧೋನಿ ಹಾಗೂ ಸಾಕ್ಷಿ ರಾಂಚಿಯ ಡಿಎವಿ ಶ್ಯಾಮಲಿ ಸ್ಕೂಲಿನಲ್ಲಿ ಒಟ್ಟಿಗೆ ಓದಿದ್ದರು. ನಂತ್ರ ಕೋಲ್ಕತ್ತಾದ ತಾಜ್ ಹೊಟೇಲ್ ನಲ್ಲಿ ಇಬ್ಬರ ಭೇಟಿಯಾಗಿತ್ತು. ಕೋಲ್ಕತ್ತಾದಲ್ಲಿ ಸಾಕ್ಷಿ ಹೊಟೇಲ್ ಮ್ಯಾನೇಜ್ ಮೆಂಟ್ ಕೋರ್ಸ್ ಮಾಡಿದ್ದರು. ಹೊಟೇಲ್ ತಾಜ್ ನಲ್ಲಿ ಇಂಟರ್ನ್ಶಿಪ್ ಮಾಡುತ್ತಿದ್ದ ವೇಳೆ ಧೋನಿಯನ್ನು ಭೇಟಿ ಮಾಡಿದ್ದರು.

ಸಾಕ್ಷಿ ಫನ್ ಲವ್ವಿಂಗ್ ಹಾಗೂ ಬುದ್ದಿವಂತೆಯಂತೆ. ಪಾರ್ಟಿಯನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಾರಂತೆ. ಸ್ನೇಹಿತರ ಜೊತೆ ಸಮಯ ಕಳೆಯುವುದೆಂದ್ರೆ ಸಾಕ್ಷಿಗೆ ಇಷ್ಟವಂತೆ. ಧೋನಿಯನ್ನು ಮದುವೆಯಾಗುವ ಮೊದಲೇ ಕೆಲ ಪಾರ್ಟಿ ಫೋಟೋಗಳು ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಆಗಿವೆ. ಆ ಫೋಟೋಗಳಲ್ಲಿ ಪಾರ್ಟಿ ಮೂಡ್ ನಲ್ಲಿದ್ದಾರೆ ಸಾಕ್ಷಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...