alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತ-ಲಂಕಾ 2 ನೇ ಏಕದಿನ ಪಂದ್ಯದ ಬಳಿಕ ಈ ಧೋನಿಯ ನಿವೃತ್ತಿ..!

ಸದ್ಯ ದೆಹಲಿಯಲ್ಲಿ ಭಾರತ-ಶ್ರೀಲಂಕಾ ನಡುವಣ ನಿರ್ಣಾಯಕ 3ನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಅದಾದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿಯಿದ್ದು, ಕೊಹ್ಲಿ ಪಡೆಗೆ ವರ್ಷದ ಕೊನೆಯ ಏಕದಿನ ಸರಣಿ ಅದಾಗಲಿದೆ. ಡಿಸೆಂಬರ್ 13ರಂದು ಮೊಹಾಲಿಯ ಪಿಸಿಎ ಮೈದಾನದಲ್ಲಿ 2ನೇ ಏಕದಿನ ಪಂದ್ಯ ನಡೆಯಲಿದೆ.

ಈ ಪಂದ್ಯದ ಬಳಿಕ 10 ವರ್ಷ ಸೇವೆ ಸಲ್ಲಿಸಿದ ಧೋನಿಯನ್ನು ಗೌರವಿಸಲಾಗುತ್ತದೆ. ಯಾಕಂದ್ರೆ ಈ ಪಂದ್ಯದ ನಂತರ ಧೋನಿ ನಿವೃತ್ತಿ ಹೊಂದಲಿದ್ದಾರೆ. ಅಷ್ಟಕ್ಕೂ ನಾವ್ ಹೇಳ್ತಿರೋದು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಅಲ್ಲ. ಸುಮಾರು 10 ವರ್ಷಗಳಿಂದ ಮೊಹಾಲಿ ಪೊಲೀಸ್ ಪಡೆಯಲ್ಲಿ ಕೆಲಸ ಮಾಡ್ತಿರೋ ಶ್ವಾನದಳದ ನಾಯಿಯ ಬಗ್ಗೆ.

ಧೋನಿ ಹೆಸರಿನ ಈ ಲಾಬ್ರೆಡಾರ್ ನಾಯಿ 3 ವರ್ಷ ಪ್ರಾಯದಿಂದ್ಲೂ ಪೊಲೀಸರಿಗೆ ಬೆನ್ನೆಲುಬಾಗಿ ನಿಂತಿತ್ತು. ಧೋನಿ ಜೊತೆಗೆ ಜಾನ್ ಮತ್ತು ಪ್ರೀತಿ ಎಂಬ ಇನ್ನೆರಡು ನಾಯಿಗಳು ಕೂಡ ನಿವೃತ್ತಿ ಹೊಂದಲಿವೆ. 2011ರಲ್ಲಿ ಮೊಹಾಲಿಯಲ್ಲಿ ನಡೆದ ಭಾರತ-ಪಾಕ್ ಪಂದ್ಯದ ವೇಳೆ ಧೋನಿ ಹೆಸರಿನ ಈ ಶ್ವಾನ ಭದ್ರತೆಯ ಹೊಣೆ ಹೊತ್ತಿತ್ತು.

ಈ ಶ್ವಾನ ಹಗಲಲ್ಲಿ 6-7 ಗಂಟೆ ನಿದ್ದೆ ಮಾಡುತ್ತದೆ. ಆದ್ರೆ ರಾತ್ರಿ ಪೂರ್ತಿ ಫುಲ್ ಅಲರ್ಟ್ ಆಗಿರುತ್ತದೆ. ಸ್ಫೋಟಕಗಳನ್ನು ಪತ್ತೆ ಮಾಡುವುದರಲ್ಲಂತೂ ಧೋನಿ ಎತ್ತಿದ ಕೈ. ಸರ್ಚ್ ಆಪರೇಶನ್ ಗಳಲ್ಲಿ ಅತ್ಯಂತ ಚುರುಕಾಗಿ ಕಾರ್ಯನಿರ್ವಹಿಸುತ್ತಿತ್ತು. ನಿವೃತ್ತಿ ಬಳಿಕ ಆಸಕ್ತರು ಇದನ್ನು ದತ್ತು ಪಡೆಯಲು ಅವಕಾಶವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...