alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ರಾಂತಿ ವೇಳೆ ಅದ್ಭುತ ಸಾಹಸಕ್ಕೆ ಮುಂದಾದ ಧೋನಿ

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ರಜಾ ದಿನಗಳನ್ನು ಆನಂದಿಸುತ್ತಿದ್ದಾರೆ. ಶ್ರೀಲಂಕಾ ವಿರುದ್ಧ ನಡೆಯುವ ಏಕದಿನ ಸರಣಿಯಲ್ಲಿ ಫ್ರೆಶ್ ಆಗಿ ಮೈದಾನಕ್ಕಿಳಿಯಲು ಧೋನಿ ಮುಂದಾಗಿದ್ದಾರೆ. ಡಿಸೆಂಬರ್ 10ರಂದು ಏಕದಿನ ಸರಣಿ ಶುರುವಾಗಲಿದ್ದು, ಸರಣಿಗೂ ಮುನ್ನ 36 ವರ್ಷದ ಧೋನಿ ಸ್ಕೈ ಡೈವಿಂಗ್ ಗಿಳಿದಿದ್ದಾರೆ.

ಇನ್ಸ್ಟ್ರಾಗ್ರಾಮ್ ನಲ್ಲಿ ಧೋನಿ ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಧೋನಿ ಸ್ಕೈ ಡ್ರೈವಿಂಗ್ ಗೆ ಸಿದ್ಧವಾಗಿರುವ ಫೋಟೋ ಇದಾಗಿದೆ. ವಿಮಾನದಲ್ಲಿ ಸಾವಿರಾರು ಅಡಿ ಮೇಲೇರಿ ನಂತ್ರ ಪ್ಯಾರಾಶೂಟ್ ನೆರವಿನಿಂದ ಕೆಳಕ್ಕೆ ಧುಮುಕುವ ಮಜವೆ ಬೇರೆ. ಈ ಅದ್ಭುತ ಸಾಹಸಕ್ಕೆ ಧೋನಿ ಕೈ ಹಾಕಿದ್ದಾರೆ.

ಕೆಲ ದಿನಗಳ ಹಿಂದೆ ಜಮ್ಮು-ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಧೋನಿ, ಸೇನೆಯ ಕೆಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯ ಯುವ ಕ್ರಿಕೆಟ್ ಆಟಗಾರರನ್ನು ಭೇಟಿಯಾಗಿ ಮಾತನಾಡಿದ್ದರು. ಕೂಲ್ ಕ್ಯಾಪ್ಟನ್ ಯಾವಾಗ್ಲೂ ಕೂಲ್. ಈ ವಿಷ್ಯವನ್ನು ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. ಎಂದೂ ಕೊಹ್ಲಿ ಕೋಪ ಮಾಡಿಕೊಂಡಿದ್ದನ್ನು ನಾನು ನೋಡಿಲ್ಲ. ಮಾಡಿಕೊಂಡ್ರೂ ಅದು 10 ಸೆಕೆಂಡ್ ಮಾತ್ರ ಎಂದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...