alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರೀಡಾಭಿಮಾನಿಗಳ ಸಂಕಷ್ಟಕ್ಕೆ ಹೀಗೊಂದು ಸ್ಪಂದನೆ

cricke nm j 14

ಕೋಲ್ಕತಾ: ಅಶಕ್ತರು, ಅನಾಥರಿಗೆ ನೆರವಾಗುವ ಉದ್ದೇಶದಿಂದ ಕ್ರೀಡಾಪಟುಗಳು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದನ್ನು ಸಾಮಾನ್ಯವಾಗಿ ನೋಡಿರುತ್ತೀರಿ. ಅಂತಹ ವರದಿಯೊಂದು ಇಲ್ಲಿದೆ ನೋಡಿ.

ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿರುವ ಇಬ್ಬರು ಫುಟ್ ಬಾಲ್ ಅಭಿಮಾನಿಗಳಿಗೆ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ, ಪ್ರಮುಖ ಕ್ರೀಡಾಪಟುಗಳಿಗೆ ಸೇರಿದ ವಸ್ತುಗಳನ್ನು ಹರಾಜು ಮಾಡಲಾಗಿದೆ. ಖ್ಯಾತ ಟೆನಿಸ್ ಆಟಗಾರ ಲಿಯಾಂಡರ್ ಪೇಸ್, ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಫುಟ್ ಬಾಲ್ ದಂತ ಕತೆ ಪೀಲೆ ಅವರಿಗೆ ಸೇರಿದ ವಸ್ತುಗಳನ್ನು ಹರಾಜು ಮಾಡಲಾಗಿದ್ದು, ಇದರಿಂದ ಸಂಗ್ರಹಣೆಯಾದ ಹಣವನ್ನು ಕ್ರೀಡಾಭಿಮಾನಿಗಳ ಚಿಕಿತ್ಸೆಗೆ ಬಳಸಲಾಗುವುದು.

ಕಳೆದ ಸಾಲಿನ ವಿಂಬಲ್ಡನ್ ಪಂದ್ಯಾವಳಿಯ ಮಿಶ್ರ ಡಬಲ್ಸ್ ನಲ್ಲಿ ಪ್ರಶಸ್ತಿ ಗಳಿಸಿದ ಪೇಸ್ ಅವರ ರ್ಯಾಕೆಟ್ ಅನ್ನು 1.5 ಲಕ್ಷ ರೂ.ಗೆ ಬಂಗಾಳ ಕ್ರಿಕೆಟ್ ತಂಡದ ನಾಯಕ ಮನೋಜ್ ತಿವಾರಿ ಖರೀದಿಸಿದ್ದಾರೆ. ಪೀಲೆ ಅವರ ಹಸ್ತಾಕ್ಷರ ಇರುವ ಚೆಂಡನ್ನು ಸಿನಿಮಾ ನಿರ್ಮಾಪಕ ನಮಿತ್ ಬಜೋರಿಯಾ 1.10 ಲಕ್ಷ ರೂ.ಗೆ ಖರೀದಿಸಿದ್ದು, ಧೋನಿ ಅವರು ಬಳಸಿದ್ದ ಕೀಪಿಂಗ್ ಗ್ಲೌಸ್ ಮತ್ತು ಪ್ಯಾಡ್ 1 ಲಕ್ಷ ರೂ.ಗೆ ಹರಾಜಾಗಿವೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...