alex Certify
ಕನ್ನಡ ದುನಿಯಾ       Mobile App
       

Kannada Duniya

ಒನ್ ಡೇ ಮ್ಯಾಚ್ ನಲ್ಲಿ ಹೊಸ ದಾಖಲೆ ಬರೆದ ಧೋನಿ

Zimbabwe batsman Vusimusi Sibanda, right, plays a shot as Indian wicketkeeper MS Dhoni looks on during the One Day International cricket match against India at Harare Sports Club, Wednesday, June, 15, 2016, Harare, Zimbabwe. The Indian cricket team is in Zimbabwe for the One Day International and T20 matches. (AP Photo/Tsvangirayi Mukwazhi)

ಹರಾರೆ: ಭಾರತ ಕ್ರಿಕೆಟ್ ತಂಡದ ನಾಯಕ, ಸ್ಪೋಟಕ ಬ್ಯಾಟ್ಸ್ ಮನ್, ಮ್ಯಾಚ್ ಫಿನಿಷರ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ, ಏಕದಿನ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ ಧೋನಿ ನೂತನ ದಾಖಲೆ ಬರೆದರು.

 

ವಿಕೆಟ್ ಕೀಪಿಂಗ್ ನಲ್ಲಿ ಧೋನಿ ಮಾಡಿದ ಮೋಡಿ ನಿಮಗೆ ಗೊತ್ತೇ ಇದೆ. ಅವರು, ಸ್ಟಂಪ್ ಹಿಂದೆ 350 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಧೋನಿ ಕ್ಯಾಚ್ ಹಿಡಿಯುವ ಮೂಲಕ, ಭಾರತದ ವಿಕೆಟ್ ಕೀಪರ್ ಒಬ್ಬರು, ಸ್ಟಂಪ್ ಹಿಂದೆ ಅತಿ ಹೆಚ್ಚು ವಿಕೆಟ್ ಪಡೆದ ಕೀರ್ತಿಗೆ ಭಾಜನರಾಗಿದ್ದಾರೆ. ಜಸ್ ಪ್ರೀತ್ ಬೂಮ್ರಾ ಎಸೆತದಲ್ಲಿ ಎಲ್ಫನ್ ಚೆಗುಂಬರಾ ಅವರ ಕ್ಯಾಚ್ ಪಡೆದು ಧೋನಿ ಈ ಸಾಧನೆ ಮಾಡಿದರು. 278 ಏಕದಿನ ಪಂದ್ಯಗಳನ್ನಾಡಿರುವ ಧೋನಿ 261 ಕ್ಯಾಚ್, 89 ಸ್ಟಂಪ್ ಔಟ್ ಮಾಡಿದ್ದಾರೆ.

 

ಅದೇ ರೀತಿ ಶ್ರೀಲಂಕಾ ಆಟಗಾರ ಕುಮಾರ್ ಸಂಗಕ್ಕಾರ 482 ವಿಕೆಟ್ ಗಳನ್ನು ಸ್ಟಂಪ್ ಹಿಂದೆ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಆಟಗಾರ ಆಡಂ ಗಿಲ್ ಕ್ರಿಸ್ಟ್ 472 ವಿಕೆಟ್ ಪಡೆದು 2ನೇ ಸ್ಥಾನದಲ್ಲಿದ್ದರೆ, 3ನೇ ಸ್ಥಾನದಲ್ಲಿರುವ ಸೌತ್ ಆಫ್ರಿಕಾದ ಮಾರ್ಕ್ ಬೌಷರ್ 424 ವಿಕೆಟ್ ಪಡೆದಿದ್ದಾರೆ. ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಧೋನಿ ಭಾರತೀಯ ಆಟಗಾರರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...