alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿಗೆ ಲಾಸ್ಟ್ ಬಾಲ್ ನಲ್ಲಿ ಜಿಂಬಾಬ್ವೆ ಬೌಲರ್ ಟಾಂಗ್

dhoni

ಹರಾರೆ: ಕೊನೆಯ ಓವರ್ ಗಳಲ್ಲಿ ಅಧ್ಬುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ, ಬೆಸ್ಟ್ ಮ್ಯಾಚ್ ಫಿನಿಷರ್ ಎಂಬ ಕೀರ್ತಿಗೆ ಪಾತ್ರವಾಗಿರುವ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ, ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಗರ ಬಡಿದಂತಾಗಿದ್ದಾರೆ.

ಕೊನೆಯ ಓವರ್ ಗಳಲ್ಲಿ ಕಡಿಮೆ ಎಸೆತಗಳಿಗೆ ಹೆಚ್ಚು ರನ್ ಗಳಿಸುವ ಒತ್ತಡದಲ್ಲಿ ಬಿಡು ಬೀಸಾಗಿ ಬ್ಯಾಟಿಂಗ್ ಮಾಡುವ ಧೋನಿ, ಸಿಕ್ಸರ್, ಬೌಂಡರಿ ಬಾರಿಸಿ ಬೆಸ್ಟ್ ಮ್ಯಾಚ್ ಫಿನಿಷರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಜಿಂಬಾಬ್ವೆ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ 170 ರನ್ ಗೆಲುವಿನ ಗುರಿ ಬೆನ್ನತ್ತಿದ ಭಾರತ, ಕೇವಲ 2 ರನ್ ಅಂತರದಲ್ಲಿ ಸೋಲು ಕಂಡಿತು. ಜಿಂಬಾಬ್ವೆ ಆಟಗಾರನ ಚಾಣಾಕ್ಷತೆಗೆ ಧೋನಿ ಮಂಕಾಗಿದ್ದಾರೆ. ಕೊನೆಯ ಓವರ್ ನಲ್ಲಿ ಟೀಂ ಇಂಡಿಯಾ ಗೆಲುವಿಗೆ 8 ರನ್ ಅಗತ್ಯವಿತ್ತು.

ಜಿಂಬಾಬ್ವೆ ಬೌಲರ್ ನೆವಿಲ್ಲೆ ಮೆಡ್ಡೀವ್ ಬೌಲಿಂಗ್ ಮಾಡಲು ಬಂದಿದ್ದು, ಇನ್ನೇನು ಧೋನಿ ವಿನ್ನಿಂಗ್ ಶಾಟ್ ಬಾರಿಸಲಿದ್ದಾರೆ ಎಂದು ಎಲ್ಲರೂ ಕಾಯುತ್ತಿದ್ದರು. ಆದರೆ, ನೆವಿಲ್ಲೆ 8 ರನ್ ಗಳಿಸಲು ಅವಕಾಶ ಕೊಡಲಿಲ್ಲ. ಕೊನೆಯ ಎಸೆತದಲ್ಲಿ 4 ರನ್ ಬೇಕಿದ್ದ ಸಂದರ್ಭದಲ್ಲಿ ಧೋನಿ, ಸಿಕ್ಸರ್ ಇಲ್ಲವೇ, ಬೌಂಡರಿ ಬಾರಿಸಬಹುದೆಂಬುದನ್ನು ಅರಿತ ನೆವಿಲ್ಲೆ ಕೊನೆಯ ಎಸೆತವನ್ನು ನಿಧಾನಗತಿಯಲ್ಲಿ ಎಸೆದಿದ್ದಾರೆ. ಇದನ್ನು ಅರಿಯದ ಧೋನಿ ಮಂಕಾಗಿದ್ದಾರೆ. ಅಂತಿಮವಾಗಿ ಜಿಂಬಾಬ್ವೆ 2 ರನ್ ಅಂತರದಿಂದ ಗೆಲುವು ಕಂಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...