alex Certify
ಕನ್ನಡ ದುನಿಯಾ       Mobile App
       

Kannada Duniya

”ಧೋನಿ ಫಾರ್ಮ್ ಬಗ್ಗೆ ಮಾತನಾಡುವ ಮೊದಲು ದಾಖಲೆ ನೋಡಿ”

ತಿರುವನಂತಪುರಂನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯ ಮಂಗಳವಾರ ನಡೆಯಲಿದೆ. ಪಂದ್ಯಕ್ಕೂ ಮುನ್ನ ಭಾರತದ ವೇಗಿ ಭುವನೇಶ್ವರ್ ಕುಮಾರ್ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪರ ಬ್ಯಾಟ್ ಬೀಸಿದ್ದಾರೆ. ಧೋನಿ ಆಟವನ್ನು ಬಣ್ಣಿಸಿರುವ ಭುವನೇಶ್ವರ್ ಕುಮಾರ್, ಧೋನಿ ಫಾರ್ಮ್ ಬಗ್ಗೆ ಮಾತನಾಡುವ ಮೊದಲು ಅವರ ದಾಖಲೆಗಳನ್ನು ನೋಡಿ ಎಂದಿದ್ದಾರೆ.

ನಮ್ಮ ತಂಡದಲ್ಲಿ ಧೋನಿ ಆಟದ ಬಗ್ಗೆ ಯಾರಿಗೂ ಸಂದೇಹವಿಲ್ಲವೆಂದು ಭುವನೇಶ್ವರ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ರಾಜ್ಕೋಟಾದಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾವನ್ನು ನ್ಯೂಜಿಲ್ಯಾಂಡ್ ಮಣಿಸಿತ್ತು. ಆ ನಂತ್ರ ಧೋನಿ ಆಟದ ಬಗ್ಗೆ ಪ್ರಶ್ನೆಗಳು ಶುರುವಾಗಿದ್ದವು. ಮಾಜಿ ವೇಗಿ ಅಜಿತ್ ಅಗರ್ಕರ್ ಮೊದಲ ಬಾರಿ ಈ ಬಗ್ಗೆ ಪ್ರಶ್ನೆ ಮಾಡಿದ್ದರು. ಧೋನಿ ಈಗ್ಲೂ 20-20 ಆಡೋದು ಎಷ್ಟು ಸರಿ ಎಂದಿದ್ದರು. ವಿವಿಎಸ್ ಲಕ್ಷ್ಮಣ್ ಕೂಡ ಇದಕ್ಕೆ ಧ್ವನಿಗೂಡಿಸಿದ್ದರು. ಧೋನಿ ಯುವ ಆಟಗಾರರಿಗೆ ಸ್ಥಾನ ಬಿಟ್ಟುಕೊಡಬೇಕೆಂದು ಲಕ್ಷ್ಮಣ್ ಹೇಳಿದ್ದರು.

ವೀರೇಂದ್ರ ಸೆಹ್ವಾಗ್ ಕೂಡ ಧೋನಿ ಆಟದ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ. ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಅವರು ಸಲಹೆ ನೀಡಿದ್ದಾರೆ. ಈ ಎಲ್ಲ ಆರೋಪಗಳನ್ನು ಆಲಿಸಿದ ಭುವನೇಶ್ವರ್ ಕುಮಾರ್ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...