alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಟೆಸ್ಟ್ ಪಂದ್ಯದ ಪಿಚ್ ವೀಕ್ಷಣೆ ಮಾಡಿದ್ರು ಧೋನಿ

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಆದ್ರೂ ಭಾರತ-ಶ್ರೀಲಂಕಾ ಟೆಸ್ಟ್ ಪಂದ್ಯಕ್ಕೆ ಯಾವ ರೀತಿ ತಯಾರಿ ನಡೆಯುತ್ತಿದೆ ಎಂಬುದನ್ನು ವೀಕ್ಷಿಸಲು ಕೋಲ್ಕತ್ತಾಗೆ ಹೋಗಿದ್ದರು.

ನವೆಂಬರ್ 16-20 ರವರೆಗೆ ಈಡನ್ ಗಾರ್ಡನ್ ನಲ್ಲಿ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಮೊದಲ ಟೆಸ್ಟ್ ಪಂದ್ಯವನ್ನಾಡಲಿದೆ. ಗುರುವಾರ ಬೆಳಿಗ್ಗೆ ಈಡನ್ ಗಾರ್ಡನ್ ಗೆ ತೆರಳಿದ ಎಂ.ಎಸ್. ಧೋನಿ ಟೆಸ್ಟ್ ಗೆ ನಡೆಯುತ್ತಿರುವ ತಯಾರಿಯನ್ನು ವೀಕ್ಷಿಸಿದ್ರು. ಜೊತೆಗೆ ಟೀಂ ಇಂಡಿಯಾಕ್ಕೆ ಶುಭಕೋರಿದ್ರು.

ವಾಸ್ತವವಾಗಿ ಮಹೇಂದ್ರ ಸಿಂಗ್ ಧೋನಿ ಜಾಹೀರಾತಿಗಾಗಿ ಈಡನ್ ಗಾರ್ಡನ್ ಗೆ ಬಂದಿದ್ದರು. ಮಾಜಿ ಆಟಗಾರ ಕಪಿಲ್ ದೇವ್ ಕೂಡ ಧೋನಿ ಜೊತೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಾಹೀರಾತಿನ ಚಿತ್ರೀಕರಣದ ಹಿನ್ನೆಲೆಯಲ್ಲಿ ಇಡೀ ದಿನ ಧೋನಿ ಹಾಗೂ ಕಪಿಲ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡ್ತಿದ್ದರು. ಕೆಲ ಮಕ್ಕಳು ಕೂಡ ಧೋನಿ, ಕಪಿಲ್ ಜೊತೆ ಆಟವಾಡಿದ್ರು.

ಇಂದು ಕೊನೆ ಭಾಗವನ್ನು ಧೋನಿ ಶೂಟ್ ಮಾಡಲಿದ್ದಾರೆ. ನಂತ್ರ ದುಬೈಗೆ ಧೋನಿ ತೆರಳಲಿದ್ದಾರೆ. ನವೆಂಬರ್ 11ರಂದು ದುಬೈನಲ್ಲಿ ಎಂ.ಎಸ್. ಧೋನಿ ಕ್ರಿಕೆಟ್ ಅಕಾಡೆಮಿ ಪ್ರಾರಂಭಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...