alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ ಅಭಿಮಾನಿಗೆ ಚುರುಕು ಮುಟ್ಟಿಸಿದ ಜಯವರ್ಧನೆ

dhoni

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಫೇಮಸ್ ಕ್ರಿಕೆಟಿಗ ಅನ್ನೋದ್ರಲ್ಲಿ ಅನುಮಾನವಿಲ್ಲ. ಅವರ ಬಗ್ಗೆ ಕ್ರಿಕೆಟ್ ಪ್ರೇಮಿಗಳಿಗೆ ಅಭಿಮಾನವಿದೆ. ಆದ್ರೆ ಧೋನಿಯನ್ನು ಹೊಗಳುವ ಭರದಲ್ಲಿ ಅಭಿಮಾನಿಯೊಬ್ಬ ವಿಶ್ವದ ವೇಗಿ ಎನಿಸಿಕೊಂಡಿರೋ ಜಮೈಕಾದ ಉಸೇನ್ ಬೋಲ್ಟ್ ಗೆ ಹೋಲಿಸಿದ್ದಾನೆ.

8 ಬಾರಿ ಒಲಿಂಪಿಕ್ಸ್ ಚಾಂಪಿಯನ್ ಆಗಿದ್ದ ಬೋಲ್ಟ್ ಈಗ ನಿವೃತ್ತಿ ಹೇಳಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ನಲ್ಲಿ ಕಂಚು ಗೆದ್ದ ಬೋಲ್ಟ್, ವಿದಾಯ ಘೋಷಿಸಿದ್ದಾರೆ. ಬೋಲ್ಟ್ ವಿದಾಯ ಅಭಿಮಾನಿಗಳಿಗೆ ಅತೀವ ಬೇಸರ ತಂದಿದೆ, ಆದ್ರೆ ಜಗತ್ತು ಕಂಡ ಅತ್ಯದ್ಭುತ ಅಥ್ಲೀಟ್ ಗೆ ಎಲ್ಲರೂ ಸಲಾಂ ಹೇಳಿದ್ದಾರೆ.

ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆ ಕೂಡ ಬೋಲ್ಟ್ ಗೆ ಗೌರವ ಸಲ್ಲಿಸಿ ಟ್ವೀಟ್ ಮಾಡಿದ್ರು. ಇದಕ್ಕೆ ರಿಯಾಕ್ಟ್ ಮಾಡಿದ್ದ ಸ್ವಾಮಿ ರಾಮ್ ಎಂಬಾತ, ಧೋನಿಗೂ ಗೌರವ ಇರಲಿ, ಅವರು ಬೋಲ್ಟ್ ಗಿಂತ್ಲೂ ಫಾಸ್ಟ್ ಅಂತಾ ಟ್ವೀಟ್ ಮಾಡಿದ್ದ. ಅತಿರೇಕದ ಅಭಿಮಾನ ತೋರಿದ ಸ್ವಾಮಿ ರಾಮ್ ಗೆ ಜಯವರ್ಧನೆ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.

ಬೋಲ್ಟ್ ಗಿಂತ ಫಾಸ್ಟ್ ಆಗಿ ಓಡಲು ಧೋನಿ ಬೈಕ್ ಮೇಲಿದ್ರಾ ಅಂತಾ ಪ್ರಶ್ನಿಸಿದ್ದಾರೆ. ಜಯವರ್ಧನೆಯ ಟ್ವೀಟ್ ಅನ್ನು ಎಲ್ರೂ ಮೆಚ್ಚಿಕೊಂಡಿದ್ದಾರೆ. ಧೋನಿ ಬಗ್ಗೆ ಅಭಿಮಾನ ಇರೋದು ತಪ್ಪಲ್ಲ, ಆದ್ರೆ ಅದು ಅತಿರೇಕವಾಗಬಾರದು ಅನ್ನೋದನ್ನು ಜಯವರ್ಧನೆ ಸೂಕ್ಷ್ಮವಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...