alex Certify
ಕನ್ನಡ ದುನಿಯಾ       Mobile App
       

Kannada Duniya

ರಾಂಚಿಯಲ್ಲಿ ಮಗಳ ಹುಟ್ಟುಹಬ್ಬ ಆಚರಿಸಿದ ಧೋನಿ

12669582

ಕೂಲ್ ಕ್ಯಾಪ್ಟನ್ ಎಂ ಎಸ್ ಧೋನಿ ಮಗಳು ಜೀವಾ ಒಂದು ವರ್ಷ ಪೂರೈಸಿದ್ದಾಳೆ. ಫೆಬ್ರವರಿ 6ರಂದು ಆಕೆಯ ಮೊದಲ ವರ್ಷದ ಹುಟ್ಟುಹಬ್ಬ. ಮಗಳ ಬರ್ತ್ ಡೇಯನ್ನು ಧೋನಿ ಕುಟುಂಬ ಸರಳ ರೀತಿಯಲ್ಲಿ ಆಚರಿಸಿದೆ.

ಮಗಳ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಧೋನಿ ರಾಂಚಿಗೆ ಬಂದಿದ್ದರು. ಮನೆಯಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಧೋನಿ ಆಪ್ತ ಗೆಳೆಯನ ತಂದೆ ಸಾವನ್ನಪ್ಪಿರುವ ಕಾರಣ ಸರಳ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಲಾಯ್ತು. ಸಂಜೆ ಧೋನಿ ಮನೆ ಮುಂದೆ ಅಭಿಮಾನಿಗಳು ನೆರೆದಿದ್ದರು. ‘ಹ್ಯಾಪಿ ಬರ್ತ್ ಡೇ ಜೀವಾ’ ಎಂಬ ಸಂದೇಶದೊಂದಿಗೆ ಮನೆ ಮುಂದೆ ನಿಂತಿದ್ದ ಅಭಿಮಾನಿಗಳಿಗೆ ಧೋನಿ ಧನ್ಯವಾದ ಸಲ್ಲಿಸಿದ್ರು.

ಜೀವಾ ಫೆಬ್ರವರಿ 6,2015 ರಂದು ಹುಟ್ಟಿದ್ದಾಳೆ. ಆ ಸಮಯದಲ್ಲಿ ಧೋನಿ ಭಾರತದಲ್ಲಿರಲಿಲ್ಲ. ವಿಶ್ವಕಪ್ ಪಂದ್ಯಗಳಿಗಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ವಿಶ್ವಕಪ್ ಪಂದ್ಯ ಮುಗಿದ ನಂತ್ರ ಅವರು ಮಗಳ ಮುಖ ನೋಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...