alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ ಬಳಿಯಿರುವ ಬೈಕುಗಳೆಷ್ಟು ಗೊತ್ತಾ…?

dhoni-kawasaki-ninja

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರಿಗೆ ಬೈಕ್ ಕುರಿತು ಇರುವ ಕ್ರೇಜ್ ಎಲ್ಲರಿಗೂ ಗೊತ್ತೇ ಇದೆ. ಧೋನಿಯವರ ಬಳಿ ಈಗಾಗಲೇ ದುಬಾರಿ ಬೆಲೆಯ ಹಲವಾರು ಬೈಕುಗಳಿದ್ದು, ಈ ಸಾಲಿಗೆ ಹೊಸ ಹೊಸ ಬೈಕುಗಳು ಸೇರ್ಪಡೆಯಾಗುತ್ತಲೇ ಇರುತ್ತವೆ.

29 ಲಕ್ಷ ರೂ. ಬೆಲೆಯ ಕವಾಸಾಕಿ ನಿಂಜಾ ಹೆಚ್ 2 ಸೇರಿದಂದೆ ಹಲವು ಬೈಕ್ ಗಳನ್ನು ಖರೀದಿಸಿರುವ ಮಹೇಂದ್ರ ಸಿಂಗ್ ಧೋನಿಯವರು ಸಮಯ ಸಿಕ್ಕಾಗಲೆಲ್ಲಾ ತಮ್ಮಲ್ಲಿರುವ ಬೈಕುಗಳ ಪೈಕಿ ಯಾವುದಾದರೊಂದನ್ನು ಏರಿ ರೌಂಡ್ ಹಾಕಿ ಬರುತ್ತಾರೆ. ಜೊತೆಗೆ ಈ ಬೈಕುಗಳನ್ನು ಸ್ವತಃ ತಾವೇ ಕ್ಲೀನ್ ಮಾಡುತ್ತಾರೆ.

ಧೋನಿಯವರ ಬಳಿ ಹೆಲ್ಕೆಟ್ ಎಕ್ಸ್ 132, ಡುಕೇತಿ 1098, ಕವಾಸಾಕಿ ನಿಂಜಾ ಝಡ್ಎಕ್ಸ್14 ಆರ್, ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್, ಯಮಹಾ ವೈಝಡ್ಎಫ್ 600 ಸೇರಿದಂತೆ ಹಲವಾರು ಬೈಕುಗಳಿದ್ದು, ಈ ಕಲೆಕ್ಷನ್ ಗೆ ಮತ್ತಷ್ಟು ಬೈಕುಗಳು ಸೇರ್ಪಡೆಯಾಗುತ್ತಲೇ ಇವೆ. ಜೊತೆಗೆ ಧೋನಿಯವರ ಬಳಿ ಹಲವಾರು ಐಷಾರಾಮಿ ಕಾರುಗಳೂ ಸಹ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...