alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿಯ ಅದ್ಭುತ ಡಾನ್ಸ್ ವಿಡಿಯೋ ವೈರಲ್

ನ್ಯೂಜಿಲ್ಯಾಂಡ್ ಸರಣಿ ಮುಗಿಯುತ್ತಿದ್ದಂತೆ ಭಾರತೀಯ ಆಟಗಾರರು ಮನೆ ತಲುಪಿದ್ದಾರೆ. ಶ್ರೀಲಂಕಾ ಸರಣಿಗಿಂತ ಮೊದಲು ಆಟಗಾರರು ಕುಟುಂಬಸ್ಥರ ಜೊತೆ ಸಮಯ ಕಳೆಯಲಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಕೂಡ ಪತ್ನಿ ಸಾಕ್ಷಿ ಹಾಗೂ ಮಗಳು ಜೀವಾ ಜೊತೆ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ.

ಈ ಮಧ್ಯೆ ಧೋನಿಯ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ಪತ್ನಿ ಸಾಕ್ಷಿ ಕೂಡ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಸಾಕ್ಷಿ, ಧೋನಿಗೆ ಡಾನ್ಸ್ ಮಾಡಲು ಹೇಳ್ತಾರೆ. ಆರಂಭದಲ್ಲಿ ನಾಚಿಕೊಳ್ಳುವ ಧೋನಿ ದೇಸಿ ಬಾಯ್ಸ್ ಹಾಡು ಕೇಳ್ತಿದ್ದಂತೆ ಡಾನ್ಸ್ ವೇಗವನ್ನು ಹೆಚ್ಚಿಸ್ತಾರೆ.

ಧೋನಿ ಡಾನ್ಸ್ ನೋಡಿ ಸಾಕ್ಷಿ ನಗ್ತಿರುವ 37 ಸೆಕೆಂಡ್ ನ ಈ ವಿಡಿಯೋ ವೈರಲ್ ಆಗಿದೆ. ಧೋನಿ ಅಭಿಮಾನಿಗಳು ಈ ವಿಡಿಯೋ ಲೈಕ್ ಮಾಡಿ ಶೇರ್ ಮಾಡ್ತಿದ್ದಾರೆ. ಆದ್ರೆ ಇದು ಯಾವಾಗಿನ ಡಾನ್ಸ್ ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...