alex Certify
ಕನ್ನಡ ದುನಿಯಾ       Mobile App
       

Kannada Duniya

2ನೇ ಟಿ-20 ಪಂದ್ಯದಲ್ಲಿ ದಾಖಲೆ ಬರೆದ ಶಿಖರ್ ಧವನ್

ಮಂಗಳವಾರ ಲಕ್ನೋದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯಭೇರಿ ಬಾರಿಸಿದೆ. ಈ ಮೂಲಕ ಟೀಂ ಇಂಡಿಯಾ ಟಿ-20 ಸರಣಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಅದ್ಭುತ ಆರಂಭ ನೀಡಿದ್ರು.

ಶಿಖರ್ ಧವನ್ 41 ಬಾಲಿಗೆ 43 ರನ್ ಗಳಿಸಿದ್ರು. 14ನೇ ಓವರ್ ಗೆ ವಿಕೆಟ್ ಒಪ್ಪಿಸಿದ ಶಿಖರ್ ಧವನ್ ಪೆವಿಲಿಯನ್ ಗೆ ತೆರಳುವ ಮೊದಲು ದಾಖಲೆ ಬರೆದಿದ್ದಾರೆ. ಲಕ್ನೋದಲ್ಲಿ 20 ರನ್ ಗಳಿಸುತ್ತಿದ್ದಂತೆ ಶಿಖರ್ ದಾಖಲೆ ಬರೆದ್ರು. ಟಿ-20 ಪಂದ್ಯದಲ್ಲಿ 1000 ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಧವನ್ ಸ್ಥಾನ ಪಡೆದಿದ್ದಾರೆ. ಸಾವಿರ ರನ್ ಗಳಿಸಿದ ಭಾರತದ 6ನೇ ಆಟಗಾರರಾಗಿದ್ದಾರೆ.

ಧವನ್ 42 ಅಂತರಾಷ್ಟ್ರೀಯ ಟಿ-20 ಪಂದ್ಯಗಳನ್ನಾಡಿದ್ದು ಈವರೆಗೆ 1023 ರನ್ ಗಳಿಸಿದ್ದಾರೆ. ಅಂತರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಸಾವಿರ ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿ ಹೀಗಿದೆ.

ರೋಹಿತ್ ಶರ್ಮಾ: 2203 ರನ್

ವಿರಾಟ್ ಕೊಹ್ಲಿ: 2102 ರನ್

ಸುರೇಶ್ ರೈನಾ: 1605 ರನ್

ಯುವರಾಜ್ ಸಿಂಗ್: 1487 ರನ್

ಧೋನಿ: 1177 ರನ್

ಶಿಖರ್ ಧವನ್: 1023 ರನ್

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...